February 3, 2026

ದುಬೈಗೆ ತೆರಳಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಹಾವು

0
Screenshot_2022-12-11-10-03-29-72_680d03679600f7af0b4c700c6b270fe7.jpg

ನವದೆಹಲಿ: ಕೇರಳದಿಂದ ದುಬೈಗೆ ತೆರಳಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಹಾವು ಕಂಡು ಬಂದ ಘಟನೆ ಶನಿವಾರ ನಡೆದಿದೆ.

ವಿಮಾನದ ಸರಕು ಇಡುವ ಜಾಗದಲ್ಲಿ ಹಾವು ಪತ್ತೆಯಾಗಿದೆ. ದುಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಬಂದಿಳಿದ ಬಳಿಕ ವಿಮಾನದಲ್ಲಿ ಹಾವು ಇರುವುದು ಗೊತ್ತಾಗಿದೆ.

ಕೂಡಲೇ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಇಳಿಸಿ ಹಾವನ್ನು ಹೊರತೆಗೆಯಲಾಯಿತು. ಬಳಿಕ ಪುನಃ ಪ್ರಯಾಣಿಕರು ತಮ್ಮ ಆಸನಗಳಲ್ಲಿ ಕುಳಿತರು.

ಇನ್ನು ಹಾವು ಪತ್ತೆಯಾಗಿರುವ ವಿಚಾರವಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯವು ತನಿಖೆಗೆ ಮುಂದಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!