September 29, 2026

ಕ್ರಿಸ್ಮಸ್ ಹಬ್ಬಕ್ಕೆ ಶಾಲೆಗೆ 10 ದಿನಗಳ ಸುದೀರ್ಘ ರಜೆ ಬೇಡ, ಒಂದು ದಿನದ ರಜೆ ಮಾತ್ರ ಕೊಡಬೇಕು: ಪ್ರಮೋದ್ ಮುತಾಲಿಕ್

0
image_editor_output_image-1357894146-1790623400816

ಮಂಗಳೂರು: ರಾಜ್ಯ ಸರ್ಕಾರವು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪ್ರಕಟಿಸಿರುವ ದಸರಾ ರಜೆಯ ಅವಧಿಯಲ್ಲಿ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳು ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸಿ, ಆ ರಜೆಯನ್ನು ಡಿಸೆಂಬರ್‌ನ ಕ್ರಿಸ್ಮಸ್ ಹಬ್ಬಕ್ಕೆ ವರ್ಗಾಯಿಸುವುದನ್ನು ವಿರೋಧಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತೀವ್ರ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಶಿಕ್ಷಣ ಸಚಿವರು, ಡಿಡಿಪಿಐ  ಹಾಗೂ ಬಿಇಒ ಅವರಿಗೆ ಮನವಿ ಸಲ್ಲಿಸುವುದರ ಜೊತೆಗೆ, ರಜೆ ನಿಯಮ ಉಲ್ಲಂಘಿಸುವ ಶಾಲೆಗಳ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.ಮಂಗಳೂರು ಹೋಟೆಲ್

 

ಕರ್ನಾಟಕ ಸರ್ಕಾರವು ಶಾಲಾ ಶೈಕ್ಷಣಿಕ ವೇಳಾಪಟ್ಟಿಯಂತೆ ದಸರಾ ಹಬ್ಬದ ಸಂದರ್ಭದಲ್ಲಿ ಕಡ್ಡಾಯವಾಗಿ 19 ರಿಂದ 20 ದಿನಗಳ ಅಧಿಕೃತ ರಜೆಯನ್ನು ಘೋಷಿಸಿದೆ. ಆದರೆ, ಹಲವು ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳು ಈ ರಜೆಯ ದಿನಗಳಲ್ಲಿ ಪರೀಕ್ಷೆಗಳನ್ನು ಇಡುವುದು, ತರಗತಿ ಹಾಗೂ ಪಠ್ಯ ಬೋಧನೆ ಮಾಡುವುದನ್ನು ಮುಂದುವರಿಸುತ್ತಿದ್ದು, ಇದು ಸರ್ಕಾರದ ನಿಯಮಾವಳಿಗಳ ನೇರ ಉಲ್ಲಂಘನೆಯಾಗಿದೆ.

ದಸರಾ ರಜೆಯನ್ನು ಕಡಿತಗೊಳಿಸಿ, ಡಿಸೆಂಬರ್‌ನಲ್ಲಿ ಕ್ರಿಸ್ಮಸ್ ಹಬ್ಬಕ್ಕೆ 10 ದಿನಗಳ ಕಾಲ ರಜೆಯನ್ನು ಶಿಫ್ಟ್ ಮಾಡಿಕೊಳ್ಳಲಾಗುತ್ತಿದೆ. ನಮ್ಮಲ್ಲಿ ಕ್ರಿಸ್ಮಸ್ ಡಿಸೆಂಬರ್ 25 ರಂದು ಸಾರ್ವಜನಿಕ ರಜೆಯಾಗಿ ಆಚರಣೆಯಾಗುತ್ತದೆ, ಅದಕ್ಕೆ ಒಂದು ದಿನದ ರಜೆ ಸೂಕ್ತ. ಅದನ್ನು ಹೊರತುಪಡಿಸಿ 10 ದಿನಗಳ ಸುದೀರ್ಘ ರಜೆ ನೀಡುವುದು ಮತ್ತು ಹಿಂದೂಗಳ ಪ್ರಮುಖ ಸಾಂಪ್ರದಾಯಿಕ ಹಬ್ಬವಾದ ದಸರಾ ಸಮಯದಲ್ಲಿ ಪರೀಕ್ಷೆಗಳನ್ನು ಇಡುವುದು ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳ ಮೇಲೆ ತೀವ್ರ ಮಾನಸಿಕ ಒತ್ತಡ ಹೇರುವಂತಾಗುತ್ತದೆ ಎಂದು ಮುತಾಲಿಕ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!