September 29, 2026

ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ: ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಮಸಿ ಎರಚಿ ಪ್ರತಿಭಟನೆ

0
image_editor_output_image-2051393333-1670732896650.jpg

ಬೆಳಗಾವಿ: ಮಹಾತ್ಮಾ ಪುಲೆ ಹಾಗು ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಮುಖಕ್ಕೆ ಮಸಿ ಎರಚಿದ ಘಟನೆ ಶನಿವಾರ ನಡೆದಿದೆ.

ಇತ್ತೀಚೆಗೆ ಮಹಾತ್ಮಾ ಪುಲೆ, ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಚಂದ್ರಕಾಂತ ಪಾಟೀಲ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಇದರಿಂದ ಕೋಪಗೊಂಡಿದ್ದ ವಿವಿಧ ಪಕ್ಷಗಳು ನಿನ್ನೆ ಬೆಳಗ್ಗೆ ಪಿಂಪ್ರಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಚೌಕ್ನಲ್ಲಿ ಪ್ರತಿಭಟನೆ ನಡೆಸಿದ್ದರು.

 

ಉದ್ಧವ್ ಠಾಕ್ರೆ ಅವರ ಶಿವಸೇನೆ ಗುಂಪು ಕೂಡ ಕಾರ್ಯಕ್ರಮದ ಸ್ಥಳದ ಬಳಿ ಪ್ರತಿಭಟನೆ ನಡೆಸಿ ಚಂದ್ರಕಾಂತ್ ಪಾಟೀಲ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

ಈ ಪ್ರತಿಭಟನೆಯಲ್ಲಿದ್ದ ಯುವಕನೋರ್ವ ಪಕ್ಕದಲ್ಲೇ ಬೆಂಗಾವಲು ಸಿಬ್ಬಂದಿಯಿದ್ದರೂ ಚಂದ್ರಕಾಂತ ಪಾಟೀಲರ ಮುಖಕ್ಕೆ ಮಸಿ ಎರಚಿ ಪರಾರಿಯಾಗಲು ಯತ್ನಿಸಿದ್ದ.

Leave a Reply

Your email address will not be published. Required fields are marked *

You may have missed

error: Content is protected !!