September 29, 2026

ಕ್ರೈಸ್ತ ಧರ್ಮಕ್ಕೆ ಮತಾಂತರ ಪ್ರಕರಣ: ಚರ್ಚ್ ಪಾಸ್ಟರ್ ಸಹಿತ ಮೂವರ ವಿರುದ್ಧ ಕೇಸ್ ದಾಖಲು

0
image_editor_output_image978721811-1670732437942.jpg

ಕೊಪ್ಪಳ: ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿದ್ದ ಪ್ರಕರಣವೊಂದು ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ ಬಲವಂತದ ಮತಾಂತರ ಹಾಗೂ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಚರ್ಚ್ ಪಾಸ್ಟರ್ ಸತ್ಯನಾರಾಯಣ ಅಲಿಯಾಸ್ ಸ್ಯಾಮುಯೇಲ್ ಮತ್ತು ಪತ್ನಿ ಹಾಗೂ ಮಗ ಚಿರಂಜೀವಿ (17) ವಿರುದ್ಧ ಕೇಸ್ ದಾಖಲಾಗಿದೆ.

 

ಕರಟಗಿಯ ರಾಮನಗರದಲ್ಲಿ ಗ್ರೇಸ್ ಪ್ರಾರ್ಥನಾ ಮಂದಿರ ನಡೆಸುತ್ತಿರುವ ಸ್ಯಾಮುಯೇಲ್, ಬಡವರನ್ನೇ ಟಾರ್ಗೆಟ್ ಮಾಡಿ ಕ್ರೈಸ್ತಧರ್ಮಕ್ಕೆ ಮತಾಂತರ ಮಾಡುತ್ತಿದ್ದ.

ಹಿಂದೂ ದೇವತೆಗಳನ್ನ ನದಿಯಲ್ಲಿ ಎಸೆಯುವಂತೆ ಹೇಳುತ್ತಿದ್ದ. ಅಲ್ಲದೇ ಮತಾಂತರವಾಗಿ ಹಿಂದೂ ದೇವರನ್ನ ಪೂಜೆ ಮಾಡಿದ್ರೆ ಕೊಲೆ, ಅತ್ಯಾಚಾರ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ. ಈ ಸಂಬಂಧ 4 ವರ್ಷಗಳ ಹಿಂದೆಯೇ ಮತಾಂತರಗೊಂಡ ಬಡ ಕುಟುಂಬ ಪೊಲೀಸ್ ಠಾಣೆಗೆ ದೂರು ನೀಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!