ಪೊಲೀಸರ ಮನೆಗೆ ನುಗ್ಗಿ ಖತರ್ನಾಕ್ ಕಳ್ಳನ ಕೈಚಳಕ: ನಗ,ನಗದು ಕಳವು
ಮಂಡ್ಯ: ಕಳ್ಳರ ಹೆಡೆಮುರಿ ಕಟ್ಟುವ ಪೊಲೀಸರ ಮನೆಗೆ ಖತರ್ನಾಕ್ ಕಳ್ಳನೊಬ್ಬ ಕನ್ನ ಹಾಕಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ನಡೆದಿದೆ.
ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹುಲಿಕೆರೆ ಗ್ರಾಮದ ರವಿ ಎಂಬುವವರು ತಮ್ಮ ಪತ್ನಿಯೊಂದಿಗೆ ಮೈಸೂರಿನ ಆಸ್ಪತ್ರೆಗೆ ತೆರಳಿದ್ದರು.
ಈ ವೇಳೆ ಪೊಲೀಸಪ್ಪ ರವಿ ಮನೆಗೆ ಎಂಟ್ರಿ ಕೊಟ್ಟಿರುವ ಖತರ್ನಾಕ್ ಕಳ್ಳರು ಮನೆ ಬೀಗ ಮುರಿದು ಬೀರುವಿನಲ್ಲಿದ್ದ 95 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.




