March 20, 2026

ಸುಳ್ಯ: ಚಿತ್ರಮಂದಿರಕ್ಕೆ ಚಿತ್ರ ವೀಕ್ಷಿಸಲು ಬಂದಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯ ಮೇಲೆ ತಂಡದಿಂದ ಹಲ್ಲೆ, ಜೀವ ಬೆದರಿಕೆ ದೂರು ದಾಖಲು

0
image_editor_output_image1159060731-1670564862879.jpg

ಸುಳ್ಯ: ಇಲ್ಲಿನ ಚಿತ್ರಮಂದಿರಕ್ಕೆ ಚಿತ್ರ ವೀಕ್ಷಿಸಲು ಬಂದಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿ , ಜೀವ ಬೆದರಿಕೆ ಒಡ್ಡಿದ ಆರೋಪದ ಮೇಲೆ ದೂರು ದಾಖಲಾಗಿದೆ.

ಆರೋಪಿಗಳನ್ನು ಅಬ್ದುಲ್ ಹಮೀದ್, ಅಶ್ರಫ್ , ಸಾಧಿಕ್, ಜಾಬೀರ್ ಜಟ್ಟಿಪಳ್ಳ, ಸಿದ್ದಿಕ್ ಬೋರುಗುಡ್ಡೆ ಎಂದು ಗುರುತಿಸಲಾಗಿದ್ದು, ಇವರ ವಿರುದ್ದ ಪ್ರಕರಣ ದಾಖಲಾಗಿದೆ.

ಬಿಕಾಂ ಓದುತ್ತಿರುವ ಹುಡುಗ ಮತ್ತು 18 ವರ್ಷ ಹರೆಯದ ಯುವತಿ ಒಂದೇ ಕೋಮಿನವರಾಗಿದ್ದು , ಕಾಂತಾರ ಚಿತ್ರ ವೀಕ್ಷಿಸಲು ಸುಳ್ಯದ ಚಿತ್ರಮಂದಿರಕ್ಕೆ ಆಗಮಿಸಿದ್ದರು.

ಪಾರ್ಕಿಂಗ್ ಸ್ಥಳದಲ್ಲಿ ಮಾತನಾಡುತ್ತಿದ್ದ ವಿದ್ಯಾರ್ಥಿಗಳನ್ನು ಸುತ್ತುವರಿದ ಐವರ ತಂಡವು ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!