March 20, 2026

ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗದುಹಾಕಿ ಅನ್ಯಾಯ: ರಮಾನಾಥ ರೈ ಕಿಡಿ

0
image_editor_output_image1338375187-1670490072682.jpg

ಬಂಟ್ವಾಳ: ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗದುಹಾಕಿ ಅನ್ಯಾಯ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಕಿಡಿಕಾರಿದ್ದಾರೆ.

ಅವರು ಬಿಸಿರೋಡಿನ ತಹಶಿಲ್ದಾರ್ ಸ್ಮಿತಾರಾಮು ಅವರನ್ನು ಬೇಟಿಯಾಗಿ ಸಹಾಯಕ ಆಯಕ್ತರಿಗೆ ಮನವಿ ಸಲ್ಲಿಸಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದರು. ಯಾವುದೇ ಕಾರಣಕ್ಕೂ ಅರ್ಹ ಮತದಾರರನ್ನು ಪಟ್ಟಿಯಿಂದ ಕಳಚಬಾರದು ಎಂದು ಅವರು ಒತ್ತಾಯಿಸಿದರು.

ಚುನಾವಣಾ ಆಯೋಗದ ಮೂಲಕ ಸೇರ್ಪಡೆ ಮತ್ತು ಕಳಚುವ ಬಗ್ಗೆ ಮಾರ್ಗದರ್ಶಿ ಸೂತ್ರದಂತೆ ಸ್ಥಳೀಯ ಮಟ್ಟದ ಮತಗಟ್ಟೆಯ ಬಿ.ಎಲ್.ಒ.ಗಳು ಪಾರದರ್ಶಕವಾಗಿ ಕಾರ್ಯನಿರ್ವಾಹಿಸುವ ಬಗ್ಗೆ ವಿಶ್ವಾಸ ವಿದೆ ಆದರೆ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಗಳು ತಮಗೆ ಬೇಕಾದ ರೀತಿಯಲ್ಲಿ ಹೆಸರುಗಳನ್ನು ಕಳಚುವಂತೆ ಬಿ.ಎಲ್.ಒ.ಗಳಿಗೆ ಒತ್ತಡ ಹೇರುವ ವಿಚಾರ ಗಮನಕ್ಕೆ ಬಂದಿದೆ. ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಭಾವಕ್ಕೆ ಒಳಗಾಗದೆ ಕಾರ್ಯನಿರ್ವಹಿಸಲು ಬಿ.ಎಲ್‌.ಒ.ಗಳಿಗೆ ಸೂಚನೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಮುಖ ರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸುದೀಪ್ ಶೆಟ್ಟಿ ಮಾಣಿ, ಪಿಯೂಸ್ ಎಲ್ ರೋಡ್ರಿಗಸ್, ಪದ್ಮನಾಭ ರೈ, ವೆಂಕಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!