March 20, 2026

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಹಾರ್ದಿಕ್ ಪಟೇಲ್ 19,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು

0
image_editor_output_image-1819362040-1670489682920.jpg

ಗುಜರಾತ್: ಪಾಟಿದಾರ್ ಕೋಟಾಗಾಗಿ ಹೋರಾಟ ನಡೆಸಿದ್ದ ಹಾರ್ದಿಕ್ ಪಟೇಲ್ 19,000 ಕ್ಕೂ ಹೆಚ್ಚು ಮತಗಳ ಅಂತರದಿಂದ ವಿರಾಮ್‌ಗಮ್ ವಿಧಾನಸಭಾ ಸ್ಥಾನದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.

28 ವರ್ಷದ ನಾಯಕ ಹಾರ್ದಿಕ್ ಪಟೇಲ್ 2015 ರಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪಾಟಿದಾರ್ ಕೋಟಾಗಾಗಿ ಹೋರಾಟ ನಡೆಸಿ ಮುನ್ನಲೆಗೆ ಬಂದಿದ್ದರು. 2019 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಜೂನ್‌ನಲ್ಲಿ ಕಾಂಗ್ರೆಸ್‌ನಿಂದ ಕೇಸರಿ ಪಕ್ಷಕ್ಕೆ ಬದಲಾಗಿದ್ದರು.

ಗರಿಷ್ಠ 95000 ಠಾಕೋರ್ ಸಮಾಜದ ಮತದಾರರಿರುವ ವೀರಾಗಮಮ್ ವಿಧಾನಸಭಾ ಕ್ಷೇತ್ರದಲ್ಲಿ ಹಾರ್ದಿಕ್ ಪಟೇಲ್ ಸ್ಪರ್ಧಿಸಿದ್ದರು. ಒಬಿಸಿ ಅಭ್ಯರ್ಥಿ ಮತ್ತು ವಿರಾಮಗಾಮ್‌ನಿಂದ ಎರಡು ಅವಧಿಗೆ ಹಾಲಿ ಶಾಸಕರಾಗಿರುವ ಕಾಂಗ್ರೆಸ್‌ನ ಲಖಾ ಭಾರವಾಡ್ ಮತ್ತು ವಿರಾಮ್‌ಗಮ್‌ನ ಅತ್ಯಂತ ಪ್ರಬಲ ಸಮುದಾಯದಿಂದ ಬಂದ ಎಎಪಿ ಅಮರಸಿಂಹ ಠಾಕೋರ್ ವಿರುದ್ಧ ಸ್ಪರ್ಧಿಸಿ ಗೆಲುವು ತನ್ನದಾಗಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!