March 20, 2026

ಜಡೇಜಾ ಪತ್ನಿ ರಿವಾಬಾ ರವೀಂದ್ರ ಬಿಜೆಪಿ ಟಿಕೆಟ್‌ ನಲ್ಲಿ ಭರ್ಜರಿ ಜಯ

0
image_editor_output_image1168927974-1670491481500.jpg

ಅಹಮದಾಬಾದ್: ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ರವೀಂದ್ರ ಜಡೇಜಾ ಅವರು ಜಾಮ್‌ ನಗರ ಉತ್ತರ-78 ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.

ಗೆಲುವು ಖಚಿತವಾದ ಬಳಿಕ ಮಾತನಾಡಿದ ರಿವಾಬಾ ಜಡೇಜಾ, “ಇದು ನನಗೆ ಮಾತ್ರವಲ್ಲ, ನಮ್ಮೆಲ್ಲರ ಗೆಲುವು. ನನ್ನನ್ನು ಅಭ್ಯರ್ಥಿಯಾಗಿ ಸಂತೋಷದಿಂದ ಸ್ವೀಕರಿಸಿದ, ನನಗಾಗಿ ಕೆಲಸ ಮಾಡಿದ, ಜನರನ್ನು ತಲುಪಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ” ಎಂದಿದ್ದಾರೆ.

ಕ್ಷೇತ್ರದಲ್ಲಿ ದಾಖಲಾದ ಒಟ್ಟು ಮತಗಳಲ್ಲಿ ಅವರು 55% ಕ್ಕಿಂತ ಹೆಚ್ಚು ಮತಗಳನ್ನು ಪಡೆದರು. ನಂತರ ಆಮ್ ಆದ್ಮಿ ಪಕ್ಷದ ಅಹಿರ್ ಕರಶನ್‌ ಭಾಯ್ ಪರ್ಬತ್‌ ಭಾಯ್ ಕರ್ಮುರ್ 23.37% ಮತ ಮತ್ತು ಕಾಂಗ್ರೆಸ್‌ ನ ಬಿಪೇಂದ್ರ ಸಿಂಗ್ ಚತುರ್ ಸಿಂಗ್ ಜಡೇಜಾ 15.49% ಮತ ಪಡೆದರು.

Leave a Reply

Your email address will not be published. Required fields are marked *

error: Content is protected !!