March 20, 2026

ಕಾರ್ಕಳ: ವಂಚನೆಯ ಪ್ರಕರಣದಲ್ಲಿ ಮಾಜಿ ಕ್ರೀಡಾಪಟುವನ್ನು ಬಂಧಿಸಿದ ಮುಂಬೈ ಪೊಲೀಸರು

0
image_editor_output_image-1708357236-1670403167027.jpg

ಕಾರ್ಕಳ: ಚೆಕ್ ವಂಚನೆಯ ಪ್ರಕರಣವೊಂದರಲ್ಲಿ ಮುಂಬಯಿಯ ನ್ಯಾಯಲಯದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಕ್ರೀಡಾಪಟು ಬದ್ರುದ್ದೀನ್ ಅಲಿಯಾಸ್ ಫಿರೋಜ್ (45)ಎಂಬಾತನನ್ನು ಕಾರ್ಕಳ ಪೊಲೀಸರು ಬಂಧಿಸಿ ಮುಂಬಯಿಗೆ ಕರೆದೊಯ್ದಿದ್ದಾರೆ.

ಕಾರ್ಕಳದ ಹಂಚಿಕಟ್ಟೆ ನಿವಾಸಿಯಾಗಿರುವ ಬದ್ರುದ್ದೀನ್ ಅಲಿಯಾಸ್ ಫಿರೋಜ್ ಎಂಬಾತನ ವಿರುದ್ಧ ಮುಂಬಯಿಯ ಠಾಣೆಯೊಂದರಲ್ಲಿ ಚೆಕ್ ವಂಚನೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಅಲ್ಲಿನ ನ್ಯಾಯಾಲಯವು ಅಪರಾಧಿ ಎಂದು ಶಿಕ್ಷೆ ಎಂದು ತೀರ್ಪು ನೀಡಿದೆ ಎನ್ನಲಾಗಿದೆ.

ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುವ ಅಪರಾಧಿಯನ್ನು ಬಂಧಿಸುವಂತೆ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ. ಇದರ ಹಿನ್ನಲ್ಲೆಯಲ್ಲಿ ಕಾರ್ಕಳ ನಗರ ಠಾಣಾ ಪೊಲೀಸರು ಅಪರಾಧಿ ಬದ್ರುದ್ದೀನ್ ಅಲಿಯಾಸ್ ಫಿರೋಜ್ ನನ್ನು ಸೋಮವಾರ ರಾತ್ರಿ ಅತನ ಮನೆಯಿಂದ ಬಂಧಿಸಿ ಮುಂಯಿಗೆ ಕರೆದೊಯ್ಯಲಾಗಿದೆ. ಪೊಲೀಸರ ತಂಡದಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಗಳು ಜೊತೆಗಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!