August 13, 2026

ಕಾಲುವೆ ನೀರಿನಲ್ಲಿ ಬಿದ್ದು ಇಬ್ಬರು ಮೃತ್ಯು

0
image_editor_output_image-1420252074-1670322033176.jpg

ಕೊಲ್ಹಾರ: ಕಬ್ಬಿನ ಗದ್ದೆಗೆ ನೀರು ಹರಿಸಲು ಹೋಗಿದ್ದ ಅಳಿಯ, ಮಾವ ಇಬ್ಬರೂ ಕಾಲುವೆ ನೀರಿನಲ್ಲಿ ಬಿದ್ದು ಮೃತಪಟ್ಟ ದುರಂತ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿ ಜರುಗಿದೆ.

ಮೃತರನ್ನು ಮಾವ ಅಶೋಕ ವೀರಬಸಪ್ಪ ಅಂಗಡಗೇರಿ (50) ಹಾಗೂ ಅಳಿಯ ಚಂದ್ರಶೇಖರ ಈರಪ್ಪ ಡೆಂಗಿ (40) ಎಂದು ಗುರುತಿಸಲಾಗಿದೆ.

ಸೋಮವಾರ ಸಂಜೆ ನಾಲೆಯಿಂದ ಗದ್ದೆಗೆ ನೀರು ಹರಿಸಲು ಮೊದಲು ಹೋಗಿದ್ದ ಮಾವ ಅಶೋಕ ನಾಲೆಯಲ್ಲಿ ಕಾಲು ಜಾರಿಬಿದ್ದಿದ್ದಾರೆ. ನಂತರ ಮಾವನನ್ನು ರಕ್ಷಿಸಲು ಮುಂದಾದ ಅಳಿಯ ಚಂದ್ರಶೇಖರ ಕೂಡ ನಾಲೆಗೆ ಇಳಿದಿದ್ದು, ತುಂಬಿ ಹರಿಯುತ್ತಿರುವ ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಡಿ.6ರ ಮಂಗಳವಾರ ಬೆಳಿಗ್ಗೆ ಕಾಲುವೆ ಬಳಿ ಚಂದ್ರಶೇಖರನ ಶವ ಪತ್ತೆಯಾಗಿದೆ. ಮಾವನ ಶವ ಮಧ್ಯಾಹ್ನದ ವೇಳೆಗೆ ಪತ್ತೆಯಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!