ಆಸ್ತಿ ವಿಚಾರಕ್ಕೆ ಸೋದರ ಸಂಬಂಧಿಯ ತಲೆ ಕಡಿದು ಕೊಲೆ: ಸೆಲ್ಫಿ ಕ್ಲಿಕ್ಕಿಸಿ ವಿಕೃತಿ!
ಜಾರ್ಖಂಡ್: ಜಾರ್ಖಂಡ್‌ನ ಕುಂತಿ ಜಿಲ್ಲೆಯ ಮುಹದ್ರು ಎಂಬಲ್ಲಿಆಸ್ತಿ ವ್ಯಾಜ್ಯ ಸಂಬಂಧ ಬುಡಕಟ್ಟು ಸಮುದಾಯಕ್ಕೆ ಸೇರಿದ ಯುವಕನೊಬ್ಬ ತನ್ನ ಸೋದರ ಸಂಬಂಧಿಯ ತಲೆ ಕಡಿದು, ಬಳಿಕ ಆ ತಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಘಟನೆ ನಡೆದಿದೆ.
ಆರೋಪಿ ಹಾಗೂ ಕೊಲೆಯಾದ ವ್ಯಕ್ತಿಯ ಕಟುಂಬದ ನಡುವೆ ದೀರ್ಘ ಕಾಲದಿಂದ ಆಸ್ತಿ ವ್ಯಾಜ್ಯ ಇದ್ದು, ಹೀಗಾಗಿ ಈ ಕೊಲೆ ನಡೆದಿದ್ದು ಘಟನೆ ಸಂಬಂಧ ಆರೋಪಿ, ಆತನ ಪತ್ನಿ ಸೇರಿ ಒಟ್ಟು 6 ಮಂದಿಯನ್ನು ದಸ್ತಗಿರಿ ಮಾಡಲಾಗಿದೆ ಎನ್ನುವುದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆಯಾದ ಕನು ಮುಂಡಾ ಎಂಬಾತನನ್ನು, ಆರೋಪಿ ಸಾಗರ್ ಮುಂಡಾ ಹಾಗೂ ಆತನ ಸ್ನೇಹಿತರು ಅಪಹರಿಸಿದ್ದು, ಕನು ಮುಂಡಾ ಮನೆಯ ಉಳಿದ ಸದಸ್ಯರೆಲ್ಲರೂ ಗದ್ದೆ ಕೆಲಸಕ್ಕೆ ಹೋಗಿದ್ದಾಗ, ಈ ಕೃತ್ಯ ಎಸಗಲಾಗಿದೆ.
ಮೃತ ಕನು ಮುಂಡಾ ಅವರದ್ದೂ ಸೇರಿದಂತೆ ಒಟ್ಟು ಐದು ಮೊಬೈಲ್, 2 ರಕ್ತಸಿಕ್ತ ಆಯುಧಗಳು, ಒಂದು ಕೊಡಲಿ ಹಾಗೂ ಒಂದು ಎಸ್‌ಯುವಿ ವಶಪಡಿಸಿಕೊಳ್ಳಲಾಗಿದೆ.