December 19, 2025

ನಮಾಜ್ ಮಾಡುವ ಸ್ಥಳದಲ್ಲಿ ವಾಲಿಬಾಲ್ ಅಂಕಣ ನಿರ್ಮಾಣ:
ಸಂಘಪರಿವಾರ ಹೇಳಿಕೆ

0
image_editor_output_image-212029181-1636792416235.jpg

ಹರಿಯಾಣದ: ಗುರ್‌ಗಾಂವ್‌ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್‌ ಮಾಡುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಇಂದು (ನ.12) ಕೂಡ ಸೆಕ್ಟರ್ 12A ರಲ್ಲಿ ಮುಸ್ಲಿಂ ಸಮುದಾಯದವರು ನಮಾಜ್ ಮಾಡುವುದಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.

ನಮಾಜ್ ಸ್ಥಳವನ್ನು ಬೆಳಗ್ಗೆಯಿಂದಲೇ ಆಕ್ರಮಿಸಿಕೊಂಡಿರುವ ಸಂಘಪರಿವಾರದ ಸದಸ್ಯರು ಇದನ್ನು ವಾಲಿಬಾಲ್ ಅಂಕಣ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಅಲ್ಲಿಯೇ ಕುಳಿತು ಪ್ರಾರ್ಥನೆ ನಡೆಯದಂತೆ ತಡೆದಿದ್ದಾರೆ.

ಕಳೆದ ವಾರ ನಮಾಜ್ ಮುಗಿಸಿದ ಮೇಲೆ ಆ ಸ್ಥಳದಲ್ಲಿ ಹಸುವಿನ ಬೆರಣಿಯನ್ನು ಸಾಲು ಸಾಲಾಗಿ ಹರಡಲಾಗಿತ್ತು. ಬಲಪಂಥೀಯ ಗುಂಪುಗಳು ನಮಾಜ್ ಸ್ಥಳದ ಮೇಲೆ ಸಗಣಿ ಹರಡಿ ಪೂಜೆ ನಡೆಸಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕಳೆದ ಹಲವಾರು ವಾರಗಳಿಂದ ಈ ಸ್ಥಳಗಳಲ್ಲಿ ಪ್ರತಿಭಟನೆ ಮತ್ತು ಬೆದರಿಕೆ ನೀಡುವ ಘಟನೆಗಳು ನಡೆದ ನಂತರ ಮುಸ್ಲಿಂ ಸಂಘಟನೆಗಳು ಇಂದು ಈ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!