February 3, 2026

ಕ್ರಿಸ್ಟಿಯಾನೋ ರೆನಾಲ್ಡೋಗೆ ಬರೋಬ್ಬರಿ 50,000 ಪೌಂಡ್ ದಂಡ: ಕಾರಣವೇನು ಗೊತ್ತೇ?

0
image_editor_output_image-212568543-1669375582158.jpg

ಲಂಡನ್: ಮ್ಯಾಂಚೆಸ್ಟರ್ ನ ಮಾಜಿ ಕ್ರೀಡಾಪಟು ಕ್ರಿಸ್ಟಿಯಾನೋ ರೆನಾಲ್ಡೋ ಅಭಿಮಾನಿಯೊಂದಿಗೆ ದುರ್ವರ್ತನೆ ತೋರಿದ್ದಕ್ಕಾಗಿ 50,000 ಪೌಂಡ್ ಗಳಷ್ಟು ದಂಡ ವಿಧಿಸಲಾಗಿದ್ದು 2 ಪಂದ್ಯಗಳಿಗೆ ನಿಷೇಧಿಸಲಾಗಿದೆ.

ಕಳೆದ ಸೆಷನ್ ನ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಅಭಿಮಾನಿಯೊಬ್ಬರ ಫೋನ್ ನ್ನು ಕಸಿದು ಎಸೆದದ್ದಕ್ಕೆ ಈ ದಂಡ, ನಿಷೇಧ ವಿಧಿಸಲಾಗಿದೆ.

ಯಾವುದೇ ದೇಶದಲ್ಲಿ ರೊನಾಲ್ಡೋ ಬೇರೆ ಯಾವುದೇ ಕ್ಲಬ್ ಗೆ ಸೇರಿದರೂ ಈ ನಿಷೇಧ ಅಲ್ಲಿಯೂ ಅನ್ವಯಿಸಲಿದೆ. ಆದರೆ ವಿಶ್ವಕಪ್ ಗೆ ಮಾತ್ರ ಈ ನಿಷೇಧ ಅನ್ವಯಿಸುವುದಿಲ್ಲ. ಕ್ರಿಸ್ಟಿಯಾನೊ ರೊನಾಲ್ಡೊ ನ.22 ರಂದು ತಕ್ಷಣದಿಂದಲೇ ಜಾರಿಯಾಗುವಂತೆ ಮ್ಯಾಂಚೆಸ್ಟರ್‌ ಯುನೈಟೆಡ್‌ ಪ್ರೀಮಿಯರ್ ಲೀಗ್ ತಂಡ ತೊರೆದಿದ್ದಾರೆ ಎಂದು ತಂಡ ಹೇಳಿತ್ತು.

ಇಂಗ್ಲೆಂಡ್ ನ ಫುಟ್ಬಾಲ್ ಸಂಘ ರೆನಾಲ್ಡೋ ಅವರ ದುರ್ವರ್ತನೆಗೆ ಈ ದಂಡ ವಿಧಿಸಿದೆ ಎಂದು ಎಫ್ಎ ಹೇಳಿಕೆಯಲ್ಲಿ ತಿಳಿಸಿದೆ. ಎಫ್.ಎ ಆರೋಪಗಳನ್ನು ರೆನಾಲ್ಡೋ ಒಪ್ಪಿದ್ದು, ವೈಯಕ್ತಿಯ ವಿಚಾರಣೆಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!