February 2, 2026

ಆತ್ಮಹತ್ಯೆಗೆ ಶರಣಾದ ಅಂತಾರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಪ್ರಾರ್ಥನಾ ಸಾಳ್ವೆ

0
IMG-20221125-WA0002.jpg

ಮಧ್ಯಪ್ರದೇಶ: ಬೆತುಲ್‌ನ ಅಂತಾರಾಷ್ಟ್ರೀಯ ಮಟ್ಟದ ಬ್ಯಾಸ್ಕೆಟ್ ಬಾಲ್ ಆಟಆಟಗಾರ್ತಿ ಪ್ರಾರ್ಥನಾ ಸಾಳ್ವೆ ಅವರು ಕೋಸ್ಮಿ ಅಣೆಕಟ್ಟೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಎರಡು ಗಂಟೆಗಳ ಕಠಿಣ ಶೋಧ ಕಾರ್ಯಾಚರಣೆಯ ನಂತರ ಪ್ರಾರ್ಥನಾ ಸಾಳ್ವೆ ಅವರ ಮೃತ ದೇಹವನ್ನು ಗೃಹರಕ್ಷಕ ದಳದ ಸಿಬ್ಬಂದಿ ಗುರುವಾರ ಅಣೆಕಟ್ಟಿನ ನೀರಿನಿಂದ ಹೊರತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಏಳು ತಿಂಗಳ ಹಿಂದೆ ಇಂದೋರ್ ನಲ್ಲಿ ನಡೆದ ಅಹಿತಕರ ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದ ಸಾಳ್ವೆ ಅವರ ಸಹೋದರನ ಸಾವಿನ ನಂತರ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿಸು ಬಂದಿದೆ.

Leave a Reply

Your email address will not be published. Required fields are marked *

error: Content is protected !!