February 3, 2026

ಮರಾಠಿ ಸಾಂಗ್ ಹಾಕದ ಹೋಟೆಲ್‍ ಸಿಬ್ಬಂದಿ ಮೇಲೆ ಹಲ್ಲೆ

0
image_editor_output_image312914765-1669350078439.jpg

ಮುಂಬೈ: ಮರಾಠಿ ಸಾಂಗ್ ಹಾಕಲಿಲ್ಲ ಎಂಬ ಕಾರಣಕ್ಕೆ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‍ಎಸ್) ಕಾರ್ಯಕರ್ತರು ಮುಂಬೈ ಸಮೀಪದ ವಾಶಿಯಲ್ಲಿರುವ ಹೋಟೆಲ್‍ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಮರಾಠಿ ಹಾಡು ಹಾಕುವ ವಿಚಾರವಾಗಿ ಎಂಎನ್‍ಎಸ್ ಕಾರ್ಯಕರ್ತರು ಮತ್ತು ಹೋಟೆಲ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.

ಸಿಬ್ಬಂದಿ ಮತ್ತು ವ್ಯವಸ್ಥಾಪಕರು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದರು, ಆದರೆ ಗಲಾಟೆ ಹೆಚ್ಚಾಗಿ ಹಿಂಸಾತ್ಮಕಕ್ಕೆ ತಿರುಗಿತು.

ಈ ಘಟನೆಯ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *

error: Content is protected !!