May 17, 2026

ರಿಯಲ್​​ ಸ್ಟಾರ್​​​​​​​ ಉಪೇಂದ್ರ ಆರೋಗ್ಯದಲ್ಲಿ ಏರುಪೇರು….ಆಸ್ಪತ್ರೆಗೆ ದಾಖಲು

0
image_editor_output_image767579031-1669281682972

ರಿಯಲ್​​ ಸ್ಟಾರ್​​​​​​​ ಉಪೇಂದ್ರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ಧಾರೆ. ಉಪೇಂದ್ರ ಎಮರ್ಜೆನ್ಸಿ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ಧಾರೆ. ನೆಲಮಂಗಲದ ಹರ್ಷ ಆಸ್ಪತ್ರೆಗೆ ಉಪೇಂದ್ರ ಅಡ್ಮಿಟ್​ ಆಗಿದ್ಧಾರೆ.

ಶಿವಮೊಗ್ಗದಿಂದ ಬರುವಾಗ ದಿಢೀರ್ ಆರೋಗ್ಯ ಕೈಕೊಟ್ಟಿದ್ದು, ಉಸಿರಾಟ ಸಮಸ್ಯೆ ಶುರುವಾದ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ಧಾರೆ. ಉಪೇಂದ್ರ ನೆಲಮಂಗಲದ ಹರ್ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ಧಾರೆ. ಸಿನಿಮಾ ಶೂಟಿಂಗ್ ವೇಳೆ ಡಸ್ಟ್ ಅಲರ್ಜಿ ಆಗಿತ್ತು. ವಾಪಸ್ ಬರುವಾಗ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ನಟ ಉಪೇಂದ್ರಗೆ ಉಸಿರಾಟ ಸಮಸ್ಯೆಯಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದು ಬೆಂಗಳೂರಿಗೆ ಪ್ರಯಾಣ ಬೆಳಸಿದ್ಧಾರೆ. ವೈದ್ಯರ ಏನೂ ಸಮಸ್ಯೆ ಇಲ್ಲ ಎಂದು ಹೇಳಿದ್ಧಾರೆ. ಡಿಸ್ಚಾರ್ಜ್ ಆಗಿ ಬೆಂಗಳೂರಿನತ್ತ ಹೊರಟಿದ್ಧಾರೆ. ಸಾಂಬ್ರಾಣಿ ಹೊಗೆಯಿಂದ  ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ಸಿನಿಮಾ ಶೂಟಿಂಗ್ ವೇಳೆ ಸಾಂಬ್ರಾಣಿ ಹೊಗೆ ಹಾಕಲಾಗಿತ್ತು.

Leave a Reply

Your email address will not be published. Required fields are marked *

error: Content is protected !!