May 17, 2026

ಕಾಸರಗೋಡು: ಮನೆ ಟೆರೇಸ್‌‌ನಿಂದ ಬಿದ್ದು ಮೃತ್ಯು

0
IMG-20221124-WA0021.jpg

ಕಾಸರಗೋಡು: ಬದಿಯಡ್ಕದಲ್ಲಿ ಮನೆಯ ಟೆರೇಸ್‌‌ನಿಂದ ಬಿದ್ದು ಕೂಲಿ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ನಡೆದಿದೆ.

ಬದಿಯಡ್ಕ ಕೆಡೆಂಜಿಯ ಗಂಗಾಧರ ನಾಯ್ಕ್ (40) ಮೃತಪಟ್ಟವರು.

ಕೆಡೆಂಜಿಯ ಸಂಬಂಧಿಕರೊಬ್ಬರ ಮನೆಯ ಟೆರೆಸ್ ನಿಂದ ಕೆಳಗೆ ಬಿದ್ದಿದ್ದು ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!