May 17, 2026

ಲತರಕಾರಿ ಖರೀದಿಸಲು ಹೋಗಿದ್ದ ಕಾಂಗ್ರೆಸ್ ಮುಖಂಡನ ಪುತ್ರಿಯನ್ನು ಅಪಹರಿಸಿದ ದುಷ್ಕರ್ಮಿಗಳು

0
image_editor_output_image493971440-1669185725192.jpg

ಜೈಪುರ: ನಗರದ ಎನ್’ಆರ್’ಐ ಸರ್ಕಲ್’ನಲ್ಲಿ ತರಕಾರಿ ಖರೀದಿಸಲು ಹೋಗಿದ್ದ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಗೋಪಾಲ್ ಕೇಶಾವತ್ ಅವರ ಪುತ್ರಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ.

ಎನ್’ಆರ್’ಐ ಸರ್ಕಲ್’ನಲ್ಲಿ ತರಕಾರಿ ಖರೀದಿಸಲು ಸ್ಕೂಟಿಯಲ್ಲಿ ನಿನ್ನೆ ಸಂಜೆ 5:30ರ ಸುಮಾರಿಗೆ ಅಭಿಲಾಷಾ (21) ಅವರು, ಸ್ವಲ್ಪ ಸಮಯದ ನಂತರ ತಂದೆಗೆ ಕರೆ ಮಾಡಿದ ಆಕೆ, ಕೆಲವು ದುಷ್ಕರ್ಮಿಗಳು ನನ್ನನ್ನು ಬೆನ್ನಟ್ಟುತ್ತಿದ್ದಾರೆ ಎಂದು ತಿಳಿಸಿದ್ದಾಳೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಕೇಶಾವತ್ ಸಾಕಷ್ಟು ಹುಡುಕಿದರೂ ಮಗಳು ಮತ್ತು ಸ್ಕೂಟಿ ಪತ್ತೆಯಾಗಿಲ್ಲ.

ಆಕೆಯ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಪುತ್ರಿ ಅಪಹರಣದ ಕುರಿತು ಗೋಪಾಲ್ ಕೇಶಾವತ್ ಪ್ರತಾಪನಗರ ಠಾಣೆಯಲ್ಲಿ ದೂರು ದಾಖಲಿಸಿ ಕೇಶಾವತ್ ಕೆಲವು ಶಂಕಿತರ ಹೆಸರನ್ನು ಪೊಲೀಸರಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!