August 13, 2026

ನೌಕಾಪಡೆಯ ಮಾಜಿ ಅಧಿಕಾರಿಯ ಹತ್ಯೆ: ದೇಹ ತುಂಡರಿಸಿ ಕೊಳಕ್ಕೆ ಎಸೆದ ಮಗ!

0
IMG-20221120-WA0016.jpg

ಕೋಲ್ಕತ್ತಾ ಬಳಿಯ ಬರುಯಿಪುರ್ ಪ್ರದೇಶದಲ್ಲಿ ನೌಕಾಪಡೆಯ ಮಾಜಿ ಅಧಿಕಾರಿಯನ್ನು ಪುತ್ರನೊಬ್ಬ ಕೊಲೆಗೈದು, ದೇಹವನ್ನು ತುಂಡರಿಸಿ, ಮಾಂಸದ ತುಂಡುಗಳನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿ ಕೊಳಕ್ಕೆ ಎಸೆದಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಉಜ್ವಲ್ ಚಕ್ರವರ್ತಿ (55) ಎಂದು ಗುರುತಿಸಲಾಗಿದ್ದು, ಅವರು 2000 ರಲ್ಲಿ ನಿವೃತ್ತರಾದ ಭಾರತೀಯ ನೌಕಾಪಡೆಯ ಮಾಜಿ ನಾನ್ ಕಮಿಷನ್ಡ್ ಅಧಿಕಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಉಜ್ವಲ್ ಚಕ್ರವರ್ತಿ ಕಾಣೆಯಾದ ಬಗ್ಗೆ ದೂರು ನೀಡಿದ್ದು, ಇದೀಗ ಅವರ ದೇಹವು ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಉಜ್ವಲ್ ಮದ್ಯವ್ಯಸನಿಯಾಗಿದ್ದು, ಮಗನ ಮೇಲೆ ಹಲ್ಲೆ ನಡೆಸುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಕೋಪಗೊಂಡ ಅವರ ಮಗ ಚಕ್ರವರ್ತಿ ಮೇಲೆ ಹಲ್ಲೆ ಮಾಡಿ ಕೊಂದು ಬಳಿಕ ದೇಹದ ಭಾಗಗಳನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಬರುಯಿಪುರ್ ಪ್ರದೇಶದ ಕೊಳಕ್ಕೆ ಎಸೆದಿದ್ದು, ಇದಕ್ಕೆ ಉಜ್ವಲ್ ಚಕ್ರವರ್ತಿ ಪತ್ನಿಯೂ ಸಹಾಯ ಮಾಡಿದ್ದಾಳೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!