August 13, 2026

ಆಟೋದಲ್ಲಿ ಸ್ಪೋಟ ಪ್ರಕರಣ: ಮಂಗಳೂರು ಮೂಲದ ಇಬ್ಬರು ಮೈಸೂರಿನಲ್ಲಿ ಪೊಲೀಸ್ ವಶಕ್ಕೆ

0
IMG-20221120-WA0017.jpg

ಮೈಸೂರು: ಮಂಗಳೂರಿನ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮೂಲದ ಇಬ್ಬರನ್ನು ಪೊಲೀಸರ ತಂಡವು ಮೈಸೂರಿನಲ್ಲಿ ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ.

ಆಟೋದಲ್ಲಿ ಪ್ರಯಾಣಿಕನ ರೂಪದಲ್ಲಿದ್ದ ಶಂಕಿತ ಭಯೋತ್ಪಾದಕನಿಗೆ ಮೊಬೈಲ್ ನೀಡಿದ್ದ ಎನ್ನಲಾದ ವ್ಯಕ್ತಿಯನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಶಂಕಿತ ಉಗ್ರನ ಸ್ನೇಹಿತನನ್ನು ವಶಕ್ಕೆ ಪಡೆದಿದ್ದು, 10 ಕ್ಕೂ ಹೆಚ್ಚು ಮೊಬೈಲ್‌ ಗಳನ್ನು ಆತ ಶಂಕಿತ ಉಗ್ರನಿಗೆ ನೀಡಿದ್ದಾನೆ ಎನ್ನಲಾಗಿದೆ.

ಮಂಗಳೂರು ಪೊಲೀಸರು ತಂಡವು ಮೈಸೂರಿಗೆ ಬಂದಿದ್ದು, ಜಂಟಿ ಕಾರ್ಯಾಚರಣೆ ಕೈಗೊಂಡಿದೆ.

Leave a Reply

Your email address will not be published. Required fields are marked *

You may have missed

error: Content is protected !!