March 20, 2026

ಬಂಟ್ಟಾಳ: ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಪ್ರವಾದಿ (ಸ.ಅ.)ರವರ ಸೀರತ್ ಕಾರ್ಯಕ್ರಮ

0
IMG-20221116-WA0028.jpg

ಬಂಟ್ವಾಳ: ಇಲ್ಲಿಗೆ ಸಮೀಪದ ಕಲ್ಲಡ್ಕದ ಗೋಳ್ತಮಜಲುನಲ್ಲಿರುವ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಪ್ರವಾದಿ ಮುಹಮ್ಮದ್ (ಸ. ಅ.) ರವರ ಸೀರತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅನುಪಮಾ ಮಹಿಳಾ ಮಾಸಿಕದ ಉಪಸಂಪಾದಕಿಯವರಾದ ಶ್ರೀಮತಿ ಸಬೀಹಾ ಫಾತಿಮಾರವರು ಕುರ್ ಆನ್ ಮತ್ತು ಪ್ರವಾದಿ ಮಹಮ್ಮದ್(ಸ)ರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮಹತ್ವದ ಕುರಿತು ಸವಿವರವಾದ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಹೇಮಲತಾ ಬಿ.ಡಿ., ಉಪ ಪ್ರಾಂಶುಪಾಲರಾದ ಶ್ರೀಮತಿ ಮಮಿತಾ ಎಸ್.ರೈ., ಮೌಲ್ಯ ಶಿಕ್ಷಣ ವಿಭಾಗದ ಉಪನ್ಯಾಸಕಿ ಶ್ರೀಮತಿ ಸಲೀಮಾರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ವಿದ್ಯಾರ್ಥಿನಿಯರಾದ ಕುಮಾರಿ ಸಫ್ರತ್ ಕಿರಾಅತ್ ಪಠಿಸಿದರು, ಕುಮಾರಿ ರಿಷಾ ಅವರು ಸ್ವಾಗತಿಸಿ, ಕುಮಾರಿ ಅಮೀನತ್ ಸಾಯಿಸ್ತಾ ಧನ್ಯವಾದವಿತ್ತರು, ಕುಮಾರಿ ಫಾತಿಮಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!