March 20, 2026

ಉಳ್ಳಾಲ: ವಿದ್ಯುತ್ ಕಂಬಕ್ಕೆ ಮಾರುತಿ 800 ಕಾರು ಢಿಕ್ಕಿ: ಕಾರು ಚಲಾಯಿಸುತ್ತಿದ್ದ ವಿದ್ಯಾರ್ಥಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರು: ಗುದ್ದಿದ ರಭಸಕ್ಕೆ ನೆಲಕ್ಕುರುಳಿದ ವಿದ್ಯುತ್ ಕಂಬ

0
IMG-20221117-WA0000.jpg

ಉಳ್ಳಾಲ: ಉಳ್ಳಾಲ ನಾಟೆಕಲ್ ಸಮೀಪದ ಸಂಕೇಶ ಎಂಬಲ್ಲಿ ವಿದ್ಯುತ್ ಕಂಬಕ್ಕೆ ಮಾರುತಿ 800 ಢಿಕ್ಕಿ ಹೊಡೆದು ಕಂಬ ಅಪ್ಪಚ್ಚಿಯಾಗಿ ನೆಲಕ್ಕುರುಳಿದರೂ, ಕಾರು ಚಲಾಯಿಸುತ್ತಿದ್ದ ವಿದ್ಯಾರ್ಥಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ಮಾರುತಿ 800 ಕಾರು ಢಿಕ್ಕಿ ಹೊಡೆದರೂ, ಯಾವುದೇ ರೀತಿಯ ಹಾನಿಯಾಗಿಲ್ಲ.

ಇನ್ನು ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಸಂಪೂರ್ಣ ಹಾನಿಯಾಗಿ ನೆಲಕ್ಕುರುಳಿದೆ.

ಬೆಲೂನ್ ಇದ್ದರೂ ಸಾವನ್ನಪ್ಪುವ ಅಪಘಾತಗಳನ್ನು ನಾವು ನೋಡುತ್ತಿರುವಾಗ, ಮಾರುತಿ‌ 800 ಕಾರೇ ಎಂದಿಗೂ ಬಲಿಷ್ಠ ಅನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂತು.

ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ತೆರವು ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!