March 22, 2026

ಶ್ರದ್ಧಾ ವಾಕರ್ ಭೀಕರ ಹತ್ಯೆ ಪ್ರಕರಣ: ಆರೋಪಿ ಅಫ್ತಾಬ್ ಕುಟುಂಬ ಅಜ್ಞಾತ ಸ್ಥಳಕ್ಕೆ ಶಿಪ್ಟ್!

0
image_editor_output_image-1652340337-1668611052027

ಮುಂಬೈ:  ಶ್ರದ್ಧಾ ವಾಕರ್ ಭೀಕರ ಹತ್ಯೆ ಪ್ರಕರಣ ಕೆದಕುತ್ತಾ ಹೋದಂತೆ ಒಂದೊಂದೊ ನಿಗೂಢತೆ ತೆರೆದುಕೊಳ್ಳುತ್ತಿದೆ.

ಹೊಸ ವಿಚಾರವೇನೆಂದರೆ ಮುಂಬೈನಲ್ಲಿ ವಾಸಿಸುತ್ತಿದ್ದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಕುಟುಂಬವು ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡಿದ್ದು, ಘಟನೆ ಬೆಳಕಿಗೆ ಬಂದ ಬಳಿಕ ಈವರೆಗೂ ಪತ್ತೆಯಾಗಿಲ್ಲ.

ಮಗಳು ಸಂಪರ್ಕ ಸಿಗದ ಹಿನ್ನಲೆ ಶ್ರದ್ಧಾ ತಂದೆ, ದೆಹಲಿಗೂ ಮುನ್ನ ಪಾಲ್ಘರ್ ಮಾಣಿಕ್‌ಪುರ ಠಾಣೆಯಲ್ಲಿ ಮೊದಲು ನಾಪತ್ತೆ ದೂರು ದಾಖಲಿಸಿದ್ದರು. ಹೀಗಾಗಿ ಮಾಣಿಕ್‌ಪುರ ಪೊಲೀಸರು ಅಫ್ತಾಬ್‌ನನ್ನು ವಿಚಾರಣೆಗೆ ಕರೆಸಿಕೊಂಡಿದ್ದರು. ಅಕ್ಟೋಬರ್ 26 ರಂದು, ಮಾಣಿಕ್‌ಪುರ ಪೊಲೀಸರು ಅಫ್ತಾಬ್‌ನ ಹೇಳಿಕೆಯನ್ನು ಮೌಖಿಕವಾಗಿ ತೆಗೆದುಕೊಂಡಿದ್ದಾರೆ, ಈ ವೇಳೆ ಜಗಳದ ನಂತರ ಶ್ರದ್ಧಾ ಫ್ಲಾಟ್‌ನಿಂದ ಹೊರನಡೆದಿದ್ದಾಳೆ ಎಂದಿದ್ದು, ತಾನು ಮತ್ತು ಶ್ರದ್ಧಾ ಇನ್ನು ಮುಂದೆ ಒಟ್ಟಿಗೆ ಇರುವುದಿಲ್ಲ” ಎಂದು ಹೇಳಿದ್ದಾನೆ.

ನವೆಂಬರ್ 3 ರಂದು ಪೊಲೀಸರು ಅಫ್ತಾಬ್‌ಗೆ ಎರಡನೇ ಬಾರಿ ಕರೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಣಿಕಪುರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ನವೆಂಬರ್ 8 ರಂದು ದೆಹಲಿಗೆ ತೆರಳಿದ್ದರು.

ಶೃದ್ದಾ ತನ್ನ ಫೋನ್ ಅನ್ನು ಮಾತ್ರ ತನ್ನೊಂದಿಗೆ ಕೊಂಡೊಯ್ದಿದ್ದಾಳೆ. ಆದರೆ ಅವಳ ವಸ್ತುಗಳನ್ನು ತನ್ನ ಫ್ಲಾಟ್‌ನಲ್ಲಿ ಬಿಟ್ಟು ಹೋಗಿದ್ದಾನೆ. ಆಕೆ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅಫ್ತಾಬ್ ಹೇಳಿಕೊಂಡಿದ್ದಾನೆ .

ನವೆಂಬರ್ 3 ರಂದು ಆತನಿಂದ ಲಿಖಿತ ಹೇಳಿಕೆಯನ್ನು ತೆಗೆದುಕೊಂಡಿದ್ದು, ಪೊಲೀಸರು ಈ ಸಮನ್ಸ್‌ನಲ್ಲಿ ದಾಖಲೆಗಳು, ಬ್ಯಾಂಕ್ ಖಾತೆ ವಿವರಗಳು ಮತ್ತು ಮೊಬೈಲ್ ಫೋನ್ ಸ್ಥಳವನ್ನು ಸಂತ್ರಸ್ತ ಶ್ರದ್ಧಾಗೆ ಸೇರಿದ ಮಾಹಿತಿ ಎಲ್ಲವನ್ನೂ ದಾಖಲಿಸಿದ್ದರು.

ಈ ನಡುವೆ ಮಾಣಿಕಪುರ ಪೊಲೀಸರು ಮೊದಲ ಸಮನ್ಸ್ ನೀಡಿದ ಬಳಿಕ, ಯಾರಿಗೂ ತಿಳಿಸದೆ ಇವರ ಕುಟುಂಬ ತರಾತುರಿಯಲ್ಲಿ ಅಜ್ಞಾತ ಸ್ಥಳಕ್ಕೆ ಸ್ಥಳಾಂತರಗೊಂಡಿದೆ. ಕುಟುಂಬ ಶಿಫ್ಟ್ ಆಗುವ ಮೊದಲು ಅಫ್ತಾಬ್ ಕೂಡಾ ಮನೆಗೆ ಬಂದಿದ್ದು, ಆತನಿಗೆ ಬೇಕಾಗಿದ್ದ ಅಗತ್ಯ ವಸ್ತುಗಳನ್ನು ತನ್ನೊಂದಿಗೆ ಒಯ್ದಿದ್ದ.

ಪೊಲೀಸ್ ತನಿಖೆ ವೇಳೆ ಶ್ರದ್ಧಾ ಅವರ ಬ್ಯಾಂಕ್ ಖಾತೆಯ ಆನ್‌ಲೈನ್ ವಹಿವಾಟಿನ ಸಹಾಯದಿಂದ ಅಫ್ತಾಬ್‌ನ ಸುಳ್ಳು ಬಹಿರಂಗವಾಗಿದೆ.

ಶ್ರದ್ಧಾ ಅವರ ಮೊಬೈಲ್ ಫೋನ್ ಪಾಸ್‌ವರ್ಡ್ ತನಗೆ ತಿಳಿದಿತ್ತು ಎಂದು ಅಫ್ತಾಬ್ ಪೊಲೀಸರಿಗೆ ತಿಳಿಸಿದ್ದು, ಮೇ 26 ರಂದು ಆಕೆಯ ಖಾತೆಯಿಂದ 54,000 ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.

ಅದರೆ ಮೇ 22 ರ ನಂತರ ಶ್ರದ್ಧಾಳನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಅಫ್ತಾಬ್ ಹಿಂದಿನ ವಿಚಾರಣೆ ಸಂದರ್ಭ ಹೇಳಿದ್ದು,ಮೇ 26 ರಂದು ನಡೆದ ಬ್ಯಾಂಕ್ ವರ್ಗಾವಣೆಯ ಸ್ಥಳ ಮೆಹ್ರೌಲಿ ಪೊಲೀಸ್ ಠಾಣೆ ಪ್ರದೇಶವಾಗಿತ್ತು.

ಇದಲ್ಲದೆ ಮೇ 31 ರಂದು ಸಂತ್ರಸ್ತೆಯ ಇನ್‌ಸ್ಟಾಗ್ರಾಮ್ ಖಾತೆಯಿಂದ ಶ್ರದ್ಧಾ ಮತ್ತು ಆಕೆಯ ಸ್ನೇಹಿತನ ನಡುವೆ ಚಾಟ್ ನಡೆದಿದೆ. ಶ್ರದ್ಧಾ ಅವರ ಫೋನ್ ಇರುವ ಸ್ಥಳವನ್ನು ಪೊಲೀಸರು ಪತ್ತೆ ಮಾಡಿದಾಗ ಅದು ದೆಹಲಿಯ ಮೆಹ್ರೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ ಎಂದು ತಿಳಿದುಬಂದಿತ್ತು.

ಶ್ರದ್ಧಾ ತನ್ನ ಫೋನ್ ಅನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಳು ಎಂದು ಅವನು ಹೇಳಿದ ನಂತರವೂ ಶ್ರದ್ಧಾ ಮೊಬೈಲ್ ಲೋಕೇಶನ್ ಪ್ಲಾಟ್ ನಲ್ಲಿ ತೋರಿಸಿದ್ದು ಬಳಿಕ ನಿಜಾಂಶ ಬೆಳಕಿಗೆ ಬಂದಿದೆ.

ಹತ್ಯೆಗೆ ಒಂದು ವಾರದ ಮೊದಲು (ಮೇ 18ರ ಮೊದಲೇ ) ಶ್ರದ್ಧಾಳನ್ನು ಕೊಲ್ಲಲು ತಾನು ಮನಸ್ಸು ಮಾಡಿದ್ದೆ. ಆದರೆ ಅಂದು ಸಾಧ್ಯವಾಗಿರಲಿಲ್ಲಎಂದು ಅಫ್ತಾಬ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಮಂಗಳವಾರ ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!