ಪಾರ್ಟಿ ಮಾಡಿ ಯುವಕನನ್ನೇ ಕೊಲೆ ಮಾಡಿದ ಸ್ನೇಹಿತರು
ಬೆಂಗಳೂರು/ನೆಲಮಂಗಲ: ಜೊತೆಯಲ್ಲಿಯೇ ಪಾರ್ಟಿ ಮಾಡಿ ಯುವಕನೋರ್ವನನ್ನು ಸ್ನೇಹಿತರೇ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರು ಹೊರವಲಯ ಉತ್ತರ ತಾಲೂಕಿನ ಮಾಗಡಿ ರಸ್ತೆಯ ಮಾಚೋಹಳ್ಳಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ತಮಿಳುನಾಡು ಮೂಲದ ನಟರಾಜು (35) ಎಂದು ಗುರುತಿಸಲಾಗಿದೆ. ಮಹದೇವ್ ಎಂಬವರ ಬಿಲ್ಡಿಂಗ್ ಮೇಲೆ ನಟರಾಜು ಹತ್ಯೆಗೈಯಲಾಗಿದೆ.
ಮೃತ ನಟರಾಜು ಇತ್ತೀಚಿಗೆ ಅಷ್ಟೇ ತಮಿಳುನಾಡಿನಿಂದ ಬೆಂಗಳೂರಿಗೆ ಉದ್ಯೋಗ ಹರಸಿ ಬಂದಿದ್ದರು ಎನ್ನಲಾಗುತ್ತಿದೆ. ಲಾರಿ ಪಾರ್ಕಿಂಗ್‍ನಲ್ಲಿ ಕ್ಯಾರಿಯರ್ ಕೆಲಸ ಮಾಡಿಕೊಂಡಿದ್ದು ರಾತ್ರಿ ಸ್ನೇಹಿತರೊಂದಿಗೆ ನಟರಾಜು ಪಾರ್ಟಿ ಮಾಡಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಅವರನ್ನು ಸ್ನೇಹಿತರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.




