ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಮುನಾಫ್ ಪಟೇಲ್ ವಿರುದ್ಧ ಗ್ಯಾಂಗ್ ಸ್ಟರ್ ಪತ್ನಿಯಿಂದ ಅತ್ಯಾಚಾರ ಆರೋಪ
ಮುಂಬೈ: ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಮುನಾಫ್ ಪಟೇಲ್, ಐಪಿಎಲ್ ನ ಮಾಜಿ ಅಧ್ಯಕ್ಷ ರಾಜೀವ್ ಶುಕ್ಲಾ ಸೇರಿದಂತೆ ಹಲವು ಗಣ್ಯರ ವಿರುದ್ಧ ಗ್ಯಾಂಗ್ ಸ್ಟರ್ ರಿಯಾಜ್ ಭಟ್ ಪತ್ನಿ ಅತ್ಯಾಚಾರ ಆರೋಪ ಹೊರಿಸಿದ್ದಾರೆ.
ತಮ್ಮ ಉದ್ಯಮ ಪಾಲುದಾರರು ಹಾಗೂ ಇತರ ಗಣ್ಯ ವ್ಯಕ್ತಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಲು ತನ್ನ ಪತಿ ತನ್ನನ್ನು ಒತ್ತಾಯಿಸಿದ್ದರು ಎಂದು ದಾವೂದ್ ಇಬ್ರಾಹಿಂ ಆಪ್ತ ಗ್ಯಾಂಗ್ ಸ್ಟರ್ ರಿಯಾಝ್ ಭಾಟಿ ಪತ್ನಿ ರೆಹನುಮಾ ಭಾಟಿ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ಮುಂಬೈನ ಸಾಂತಾಕ್ರೂಜ್ ಪೊಲೀಸರಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಆಕೆ ಕ್ರಿಕೆಟಿಗರಾದ ಮುನಾಫ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ, ರಾಜೀವ್ ಶುಕ್ಲಾ ಹಾಗೂ ರಾಜಕಾರಣಿ ಪೃಥ್ವಿರಾಜ್ ಕೊಠಾರಿ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.
ರೆಹನುಮಾ 24 ಸೆಪ್ಟೆಂಬರ್ 2021 ರ ತನ್ನ ಅರ್ಜಿಯಲ್ಲಿ ಪಾಂಡ್ಯ, ಪಟೇಲ್, ಶುಕ್ಲಾ ಮತ್ತು ಕೊಠಾರಿ ಅವರ ಯಾವುದೇ ವಿಳಾಸಗಳನ್ನು ನೀಡಿಲ್ಲ ಅಥವಾ ಘಟನೆಗಳು ನಡೆದ ನಿರ್ದಿಷ್ಟ ದಿನಾಂಕಗಳು ಅಥವಾ ಸ್ಥಳಗಳನ್ನು ಉಲ್ಲೇಖಿಸಿಲ್ಲ ಎಂದು ವರದಿ ತಿಳಿಸಿದೆ.




