October 5, 2026

ಮುಸ್ಲಿಮರೇ ಕಳ್ಳ​ ವೋಟು ಹಾಕೋದು, ಹಿಂದೂಗಳಲ್ಲ,: ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ

0
image_editor_output_image1843040385-1791202052434

ದಾವಣೆಗೆರೆ: ಚುನಾವಣೆಗಳಲ್ಲಿ ಬೋಗಸ್ ವೋಟು ಹಾಕೋದು ಮುಸ್ಲಿಮರೇ ಹೊರತು ಹಿಂದೂಗಳಲ್ಲ.. ಅವರಿಗೆ ಆ ಧೈರ್ಯವಿಲ್ಲ ಮತ್ತು ಕಾನೂನು ಮೀರುವುದಿಲ್ಲ ಎಂದು ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಇಂದು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳ ಕುರಿತು ಮಾತನಾಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ‘ನಕಲಿ ಮತದಾನದ ವಿಚಾರದಲ್ಲಿ ಹಿಂದೂ ಸಮುದಾಯವನ್ನು ಗುರಿಯಾಗಿಸುವುದು ಸರಿಯಲ್ಲ’ ಎಂದರು.

 

ಅಂತೆಯೇ ‘ಬುರ್ಖಾ ಹಾಕೊಂಡು ಒಂದೇ ಹೆಸರಲ್ಲಿ 10 ಜನರ ವೋಟ್ ಇದೆ. ಬೋಗಸ್​ ವೋಟಿಂಗ್​ ಮಾಡುವ ಮೂಲಕ ಈ ದೇಶವನ್ನು ಪಾಕಿಸ್ತಾನ ಮಾಡಬೇಕು ಎನ್ನುವ ಷಡ್ಯಂತರ ಮಾಡಲಾಗುತ್ತಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ಮತದಾನ ಮಾಡುವಾಗ ಚುನಾವಣಾ ನಿಯಮದ ಅನ್ವಯ ಮುಖ ಕಾಣಬೇಕು. ಆದರೆ ಅವರು ಬುರ್ಖಾ ಹಾಕೊಂಡರೆ ಯಾರು ಅಂತ ಗೊತ್ತಾಗುವುದಿಲ್ಲ‘’ ಎಂದರು.

Leave a Reply

Your email address will not be published. Required fields are marked *

error: Content is protected !!