ಪುತ್ತೂರು: ಪುತ್ತೂರು ಸೇರಿದಂತೆ ಬೆಂಗಳೂರು, ಮಡಿಕೇರಿ, ಗೋಣಿಕೊಪ್ಪಲು ಹಾಗೂ ಬೆಳ್ತಂಗಡಿಯಲ್ಲಿ ಪ್ರಸಿದ್ಧವಾಗಿರುವ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಮಾಲಕರಾದ ಸರಾಫ್ ಮುಳಿಯ ಶ್ಯಾಮ ಭಟ್ (81ವ) ಅವರು ಅ.4ರಂದು ನಿಧನರಾದರು.
ಪುತ್ತೂರಿನ ಪಾಂಗ್ಲಾಯಿಯಲ್ಲಿರುವ `ಶ್ಯಾಮಲೋಚನಾ’ ನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಅವರು ಕೊನೆಯುಸಿರೆಳೆದರು.