March 20, 2026

ಬರೋಬ್ಬರಿ 10 ಬಾರಿ ಶಾಸಕರಾಗಿದ್ದ ಪ್ರಭಾವಿ ಕಾಂಗ್ರೆಸ್ ನಾಯಕ ಬಿಜೆಪಿ ಸೇರ್ಪಡೆ

0
image_editor_output_image-101805481-1667965235831.jpg

ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ 10 ಬಾರಿ ಶಾಸಕರಾಗಿದ್ದ ಪ್ರಭಾವಿ ನಾಯಕ ಮೋಹನ್‌ಸಿನ್ಹ್ ರಥ್ವಾ ಕಾಂಗ್ರೆಸ್ ತೊರೆದಿದ್ದಾರೆ.

78 ವರ್ಷದ ರಥ್ವಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಛೋಟಾ ಉದಯಪುರ ಪ್ರತಿನಿಧಿಸಿದ್ದ ಶಾಸಕ ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಜಗದೀಶ್ ಠಾಕೋರ್ ಅವರಿಗೆ ಕಳುಹಿಸಿದ್ದಾರೆ.

ಬುಡಕಟ್ಟು ಸಮುದಾಯದ ಪ್ರಭಾವಿನಾಯಕರಾಗಿರುವ ಋಥ್ವಾ 2012ಕ್ಕೂ ಛೋಟಾ ಉದಯಪುರ ಜಿಲ್ಲೆಯ ಪಾವಿ-ಜೆಟ್ಪುರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಈ ಬಾರಿ ಚುನಾವಣೆಯಲ್ಲಿ ತಾನು ಸ್ಪರ್ಧಿಸುತ್ತಿಲ್ಲ ಎಂಬುದಾಗಿ ಘೋಷಿಸಿದ್ದು, ಅವರ ಮಗ ರಾಜೇಂದ್ರಸಿನ್ಹ್ ರಥ್ವಾ ಅವರ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!