ಶಿಕ್ಷಕರ ಅರ್ಹತಾ ಪರೀಕ್ಷೆ ಅಭ್ಯರ್ಥಿಯ ಹಾಲ್‌ಟಿಕೆಟ್‌ನಲ್ಲಿ ಸನ್ನಿಲಿಯೊನ್ ಅಶ್ಲೀಲ ಚಿತ್ರ: ಎಫ್ಐಆರ್ ದಾಖಲು
ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆದ ಅಭ್ಯರ್ಥಿಯೊಬ್ಬರ ಹಾಲ್‌ಟಿಕೆಟ್‌ನಲ್ಲಿ ಅವರ ಭಾವಚಿತ್ರದ ಬದಲು ನಟಿ ಸನ್ನಿಲಿಯೊನ್ ಇರುವ ಅಶ್ಲೀಲ ಚಿತ್ರ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಕೆಲ ಮಾಧ್ಯಮಗಳಲ್ಲೂ ಈ ಸುದ್ದಿ ಪ್ರಸಾರವಾಗಿದ್ದು, ಈ ಕುರಿತು ಸೂಕ್ತ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಇಲಾಖೆಯ ದೂರು ಆಧರಿಸಿ ಶಿವಮೊಗ್ಗದಲ್ಲಿ ಎಫ್‌ಐಆರ್ ದಾಖಲಾಗಿದೆ.




