February 3, 2026

ತಾಂತ್ರಿಕ ದೋಷ: ಬೆಂಗಳೂರಿಗೆ ಹೊರಟಿದ್ದ ಏರ್‌ಏಷ್ಯಾ ವಿಮಾನಯಾನ ರದ್ದು

0
Screenshot_2022-11-07-10-08-10-67_680d03679600f7af0b4c700c6b270fe7.jpg

ಪುಣೆ : ಭಾನುವಾರ ರಾತ್ರಿ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೊರಟಿದ್ದ ಏರ್‌ಏಷ್ಯಾ ವಿಮಾನವು ಪುಣೆ ವಿಮಾನ ನಿಲ್ದಾಣದಲ್ಲಿ ತನ್ನ ಪ್ರಯಾಣವನ್ನು ರದ್ದು ಗೊಳಿಸಬೇಕಾಯಿತು.

ಎಲೆಕ್ಟ್ರಾನಿಕ್ ಸೆಂಟ್ರಲೈಸ್ಡ್ ಏರ್‌ಕ್ರಾಫ್ಟ್ ಮಾನಿಟರ್ ನಿಂದ ಬ್ರೇಕ್-ಹಾಟ್ ಎಚ್ಚರಿಕೆಯ ಸಿಗ್ನಲ್ ಬಂದ ಕಾರಣ ಏರ್ ಏಷ್ಯಾ ಫ್ಲೈಟ್ I5-1427 ತನ್ನ ಪ್ರಯಾಣ ರದ್ದುಗೊಳಿಸಿದೆ.

ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಮೂಲಗಳ ಪ್ರಕಾರ, ಬ್ರೇಕ್ ಫ್ಯಾನ್ ನಲ್ಲಿ ತಾಂತ್ರಿಕ ತೊಂದರೆ ಕಂಡು ಬಂದ ಕಾರಣ ವಿಮಾನಯಾನ ಪ್ರಯಾಣ ರದ್ದು ಮಾಡಿದೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇತ್ತ ವಿಮಾನದಲ್ಲಿದ್ದ ಪ್ರಯಾಣಿಕರು ವಿಮಾನಯಾನ ವಿಳಂಬದ ಕುರಿತು ಅಸಮಾಧಾನ ತೋಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!