August 13, 2026

ಭಟ್ಕಳ: ಬೈಕ್ ಅಪಘಾತಕ್ಕೆ ಭಯಪಟ್ಟು ಬಾಲಕ ಹೃದಯಘಾತಕ್ಕೆ ಬಲಿ

0
IMG-20221106-WA0005.jpg

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಬೈಕ್ ಅಪಘಾತದಿಂದ ಹೆದರಿಕೊಂಡ ಬಾಲಕನೊಬ್ಬ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

9ನೇ ತರಗತಿಯ ವಿದ್ಯಾರ್ಥಿ ಅಬ್ದುಲ್ಲಾ ಆಫ್ರೀಕಾ (14) ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಬಾಲಕ.

ಅಬ್ದುಲ್ಲಾ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಇನ್ನೊಂದು ಬೈಕ್ ತಾಗಿ ಅಬ್ದುಲ್ಲಾ ಆಫ್ರೀಕಾ ಬೈಕ್‌ ಸಮೇತ ಬಿದ್ದಿದ್ದು, ಬೈಕನ್ನು ಎತ್ತಿ ನಿಲ್ಲಿಸುವ ವೇಳೆ ಜನರು ಸೇರಿಕೊಂಡಿದ್ದರು. ಇದರಿಂದ ಹೆದರಿಕೊಂಡ ಅಬ್ದುಲ್ಲಾ ಅಲ್ಲಿಯೆ ಕುಸಿದ್ದು ಬಿದ್ದಿದ್ದಾನೆ.

ಇನ್ನು ಆತನನ್ನು ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಡಿವೈಎಸ್ಪಿ ಬೆಳ್ಳಿಯಪ್ಪ, ಸಿಪಿಐ ದಿವಾಕರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!