March 20, 2026

ಗುಜರಾತ್ ಸೇತುವೆ ದುರಂತ -ಆರೋಪಿಗಳ ಪರ ವಕಾಲತ್ತು ವಹಿಸಲ್ಲವೆಂದ ವಕೀಲರ ಸಂಘ

0
IMG-20221031-WA0046.jpg

ಅಹ್ಮದಾಬಾದ್: ಗುಜರಾತಿನ ಮೊರ್ಬಿಯಲ್ಲಿ ನಡೆದ ತೂಗು ಸೇತುವೆ ಕುಸಿತ ದುರಂತಕ್ಕೆ ಸಂಬಂಧಿದಂತೆ ಬಂಧಿತರಾಗಿರುವ ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ ಎಂದು ಗುಜರಾತ್ ವಕೀಲರ ಸಂಘ ಘೋಷಿಸಿರುವುದಾಗಿ ವರದಿಯಾಗಿದೆ.

ತೂಗು ಸೇತುವೆ ಕುಸಿತ ಪ್ರಕರಣದಲ್ಲಿ ಬಂಧಿತರಾದ ಒಂಬತ್ತು ಆರೋಪಿಗಳನ್ನು ನಮ್ಮ ಸಂಘದ ಯಾವುದೇ ವಕೀಲರು ಪ್ರತಿನಿಧಿಸುವುದಿಲ್ಲ ಎಂದು ಗುಜರಾತ್‌ನ ಎರಡು ವಕೀಲರ ಸಂಸ್ಥೆಗಳು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮವಾರ ಒಂಬತ್ತು ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ಅಪರಾಧ ನರಹತ್ಯೆ ಕೊಲೆಯಲ್ಲ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!