ಉಳ್ಳಾಲ: ಮಸೀದಿಗೆ ನುಗ್ಗಿ ಆರು ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿದ ಕಳ್ಳರು
ಉಳ್ಳಾಲ: ಮಸೀದಿಗೆ ನುಗ್ಗಿದ ಕಳ್ಳರು ಆರು ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿರುವ ಘಟನೆ ಇಂದು ನಸುಕಿನ ಜಾವ ಸಂಭವಿಸಿದೆ.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಕಾನ ಬದ್ರಿಯಾ ಜುಮಾ ಮಸೀದಿ ಯಲ್ಲಿ ಘಟನೆ ನಡೆದಿದೆ.
ಮಸೀದಿ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಪಿಕ್ಕಾಸು ಬಳಸಿ ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿದ್ದಾರೆ. ಮಸೀದಿ ವಠಾರದಲ್ಲಿ ಅಳವಡಿಸಿದ್ದ ಆರು ಕಾಣಿಕೆ ಡಬ್ಬಿಗಳನ್ನು ಒಡೆದು ಹಾಕಲಾಗಿದೆ.
ಶಾಲೆಯಲ್ಲಿ ಪಾರ್ಟಿ ಮಾಡಿದ ಕಳ್ಳರು!
ಮಸೀದಿಯನ್ನು ದೋಚುವ ಮುನ್ನ ಅಥವಾ ನಂತರ ಕಳ್ಳರು ಶಾಲೆಯೊಳಗಡೆ ಕುಳಿತು ಪಾರ್ಟಿ ಮಾಡಿರುವ ಸೊತ್ತುಗಳು ಪತ್ತೆಯಾಗಿದೆ. ಮುಖಗವಚ, ಚಿಕನ್ ಟಿಕ್ಕಾ ಮಾಡುವ ಯಂತ್ರ
ಉಪ್ಪು ಹುಡಿ, ಖಾರದ ಹುಡಿ, ಗ್ಯಾಸ್ ಲೈಟರ್ ಎಲ್ಲವೂ ಶಾಲೆಯ ವಠಾರದಲ್ಲಿ ಕಂಡುಬಂದಿದೆ.
ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




