ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ:
ತಲೆಮರೆಸಿಕೊಂಡವರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ
ಬೆಳ್ಳಾರೆ: ಪ್ರವೀಣ್ ನೆಟ್ಟಾರು ರವರ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡ ನಿಷೇಧಿತ ಸಂಘಟನೆ ಪಿಎಸ್ಐಯ ನಾಲ್ವರು ಸದಸ್ಯ ಬಗ್ಗೆ ಮಾಹಿತಿ ನೀಡುವಂತೆ ಎನ್.ಐ.ಎ ಆದೇಶ ಹೊರಡಿಸಿದೆ.
ಬೆಳ್ಳಾರೆ ಬೂಡು ನಿವಾಸಿ, ಮೊಹಮ್ಮದ್ ಮುಸ್ತಫಾ (ಪೈಚಾರು ಮುಸ್ತಫಾ), ಮಡಿಕೇರಿ ನಿವಾಸಿ ತುಫ್ಫೈಲ್, ಸುಳ್ಯ ನಗರ ಕಲ್ಲುಮುಟ್ಟು ನಿವಾಸಿ, ಉಮ್ಮರ್ ಫಾರೂಕ್, ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ಧಿಕ್ (ಪೈಂಟರ್ ಸಿದ್ಧಿಕ್) ಎಂಬವರು ತಲೆಮರೆಸಿಕೊಂಡಿದ್ದು, ಅವರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸಿದೆ.
ಅದೇ ರೀತಿ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎನ್.ಐ. ಎ ಪ್ರಕಟಣೆ ತಿಳಿಸಿದೆ.




