March 20, 2026

ಪುನೀತ್ ರಾಜಕುಮಾರ್‌ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ – ಮಳೆರಾಯನ ಆಶೀರ್ವಾದ

0
hr-011122-appu.jpg

ಬೆಂಗಳೂರು: ವರ್ಷಗಳ ಹಿಂದೆ ಅಗಲಿದ ನಟ ಡಾ.ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರದಾನ ಕಾರ್ಯಕ್ರಮ ನಡೆದಿದ್ದು, ಅಪ್ಪು ಪರವಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಪ್ರಶಸ್ತಿ ಸ್ವೀಕರಿಸಿದ್ದಾರೆ.

ವಿಧಾನಸಭೆಯ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟರಾದ ರಜಿನಿಕಾಂತ್, ಜೂ.ಎನ್ ಟಿಆರ್ ಅವರು ಭಾಗವಹಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುಧಾ ಮೂರ್ತಿ ಸೇರಿದಂತೆ ಗಣ್ಯರು ಅಪ್ಪು ಪರವಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.


ಈ ವೇಳೆ ಮಾತನಾಡಿದ ರಜಿನಿಕಾಂತ್, ಮಾರ್ಕಂಡೇಯ, ಪ್ರಹ್ಲಾದನಂತೆ ಕಲಿಯುಗಕ್ಕೆ ಅಪ್ಪು. ಆತ ದೇವರ ಮಗು. ಅಪ್ಪು ಆತ್ಮ ನಮ್ಮ ಸುತ್ತಲೂ ಇದೆ. ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ನೀಡುವಾಗಲೂ ಮಳೆ ಬಂದಿತ್ತು. ಈಗಲೂ ಮಳೆ ಬಂದಿದೆ ಎಂದರು.

Leave a Reply

Your email address will not be published. Required fields are marked *

error: Content is protected !!