ಪುಣೆ: ಏಕಾಏಕಿ ಹೊತ್ತಿ ಉರಿದ ಸಾರಿಗೆ ಬಸ್ – ಪ್ರಾಣಾಪಾಯರಿಂದ ಪ್ರಯಾಣಿಕರು ಪಾರು!
ಪುಣೆ: ರಾಜ್ಯ ಸಾರಿಗೆ ಬಸ್‌ಗೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಪ್ರಯಾಣಿಕರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಸ್ ಯವತ್ಮಾಲ್‌ನಿಂದ ಪುಣೆಗೆ ತೆರಳುತ್ತಿದ್ದಾಗ ಯರವಾಡ ಪ್ರದೇಶದ ಶಾಸ್ತ್ರಿ ಚೌಕ್‌ನಲ್ಲಿ ಘಟನೆ ನಡೆದಿದೆ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.

ಇನ್ನು ಬಸ್ ಚಾಲಕ ಮತ್ತು ಕಂಡಕ್ಟರ್ ವಾಹನದಿಂದ ಹೊಗೆ ಬರುವುದನ್ನು ಕಂಡ ತಕ್ಷಣ ಎಲ್ಲಾ ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸಿದ್ದು, ಪ್ರಯಾಣಿಕರು ಕೆಳಗಿಳಿದ ನಂತರ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.




