ಮಂಗಳೂರು: ಹೃದಯಾಘಾತದಿಂದ ಯುವಕ ಮೃತ್ಯು
ಮಂಗಳೂರು: ಮಂಗಳೂರಿನಲ್ಲಿ 28 ವರ್ಷದ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಯುವಕನನ್ನು ಮಂಗಳೂರಿನ ಮಹಾನಗರ ಪಾಲಿಕೆಯ ಸದಸ್ಯ ರವೂಫ್ ಬಜಾಲ್ ಅವರ ಸಹೋದರಿಯ ಮಗ ಕೃಷ್ಣಾಪುರ ನಿವಾಸಿ ಸಾಹಿಫ್ ಮುದಸ್ಸಿರ್(28 ) ಎನ್ನಲಾಗಿದೆ.

ಇನ್ನು ಸಾಹಿಫ್ ಮುದಸ್ಸಿರ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಕುಟುಂಬಸ್ಥರು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.




