March 20, 2026

ಬೆಳಗಾವಿ ಪ್ರವೇಶಕ್ಕೆ ಶಿವಸೇನೆ ಕಾರ್ಯಕರ್ತರ ಯತ್ನ: ಗಡಿಯಲ್ಲೇ ತಡೆದ ಪೊಲೀಸರು

0
image_editor_output_image85140751-1667273515339.jpg

ನಿಪ್ಪಾಣಿ (ಬೆಳಗಾವಿ ಜಿಲ್ಲೆ): ಗಡಿಭಾಗದಿಂದ ರಾಜ್ಯ ಪ್ರವೇಶಿಸಲು ಯತ್ನಿಸಿದ ಮಹಾರಾಷ್ಟ್ರದ ಶಿವಸೇನೆಯ ಕಾರ್ಯಕರ್ತರನ್ನು ಸೋಮವಾರ ತಾಲ್ಲೂಕಿನ ಕೊಗನೊಳಿ ಚೆಕ್ ಪೋಸ್ಟ್ ಬಳಿ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದ ರಾಜ್ಯ ಪೊಲೀಸರು ಅವರನ್ನು ಮರಳಿ ಕಳುಹಿಸಿದ್ದಾರೆ.

ಕರ್ನಾಟಕ ರಾಜ್ಯೋತ್ಸವದಂದು ಬೆಳಗಾವಿಯಲ್ಲಿ ರ‍್ಯಾಲಿ ಆಯೋಜಿಸಲಾಗುವುದೆಂದು ಘೋಷಿಸಿ, ರಾಜ್ಯ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಶಿವಸೇನೆಯ ಕೊಲ್ಹಾಪುರ ಜಿಲ್ಲೆಯ ಅಧ್ಯಕ್ಷ ವಿಜಯ ದೇವಣೆ ಮತ್ತು ಕಾರ್ಯಕರ್ತರನ್ನು ಗಡಿಯಲ್ಲಿಯೇ ಪೊಲೀಸರು ತಡೆದರು.

ಕೂಡಲೇ ಶಿವಸೇನೆಯ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಕುಳಿತುಕೊಂಡರು. ನಂತರ ಪಕ್ಕದ ದೂಧಗಂಗಾ ನದಿಯಲ್ಲಿ ಇಳಿದು, ‘ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ನದಿಯು ಹರಿಯುತ್ತದೆ. ಇದಕ್ಕೆ ನಮಸ್ಕರಿಸಿದ್ದು ನಾವು ಬೆಳಗಾವಿಯನ್ನು ತಲುಪಿದಂತಾಗಿದೆ’ ಎಂದು ವಿಜಯ ದಾವಣೆ ಹೇಳಿದರು.

Leave a Reply

Your email address will not be published. Required fields are marked *

error: Content is protected !!