ಗುಜರಾತ್: ತೂಗುಸೇತುವೆ ಕುಸಿದು ದುರಂತ: 60 ಮಂದಿ ಮೃತ್ಯು, ಹಲವರು ನೀರುಪಾಲು

ಗಾಂಧಿನಗರ: ಗುಜರಾತ್ ಮೊರ್ಬಿ ತೂಗು ಸೇತುವೆ ಕುಸಿತಗೊಂಡು ದುರಂತ ಸಂಭವಿಸಿದ್ದು, ಇಲ್ಲಿವರೆಗಿನ ಕಾರ್ಯಾಚರಣೆಯಲ್ಲಿ 60 ಮಂದಿ ಸಾವನ್ನಪ್ಪಿದ್ದು ಎಂದು ಶಂಕಿಸಿಲಾಗಿದ್ದು, ಹಲವರು ನೀರುಪಾಲಾಗಿದ್ದಾರೆ ಎಂದು ಶಂಕಿಸಲಾಗಿದೆ.
ಈ ತೂಗು ಸೇತುವೆ ಮೇಲೆ 500 ಮಂದಿ ನಿಂತಿದ್ದರು. ಏಕಾ ಏಕಿಯಾಗಿ ಸೇತುವೆ ಕುಸಿದು ಬಿದ್ದಿದೆ ಎನ್ನಲಾಗಿದೆ. ಮಚ್ಚು ನದಿಗೆ ನಿರ್ಮಿಸಲಾಗಿದ್ದ ಮೊರ್ಬಿ ಸೇತುವೆಯು 2001ರಿಂದೀಚೆಗೆ ಸಾಕಷ್ಟು ಹಾಳಾಗಿತ್ತು ಎನ್ನಲಾಗಿದೆ.
ಸ್ಥಳೀಯರು ಆಗಾಗ ಸೇತುವೆಯನ್ನು ದುರಸ್ತಿ ಮಾಡುತ್ತಲೇ ಬರುತ್ತಿದ್ದರು. ಇದೀಗ ಸಾರ್ವಜನಿಕರು ಸಂಚರಿಸುತ್ತಿರುವ ಹೊತ್ತಿನಲ್ಲೇ ಕುಸಿದು ಬಿದ್ದಿದೆ. ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ನೀರುಪಾಲಾಗಿದ್ದಾರೆ ಎಂದು ಶಂಕಿಸಲಾಗಿದೆ.
ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವರದಿಯನ್ನ ಪಡ್ಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪಿಎಂಓ, ದುರ್ಘಟನೆ ಬಗ್ಗೆ ಸಿಎಂ ಭುಪೇಂದ್ರ ಬಳಿ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ರಕ್ಷಣಾ ಕಾರ್ಯವನ್ನ ತುರ್ತಾಗಿ ಸಜ್ಜುಗೊಳಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿರುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದೆ.
ಜೊತೆಗೆ ದುರ್ಘಟನೆಯಲ್ಲಿ ಮೃತರಾದವರಿಗೆ ಕೇಂದ್ರ ಸರ್ಕಾರದಿಂದ 2 ಲಕ್ಷ ರೂಪಾಯಿ ಪರಿಹಾರವನ್ನ ಘೋಷಣೆ ಮಾಡಲಾಗಿದೆ. ಗಾಯಾಳುಗಳಿಗೆ 50 ಸಾವಿರ ರೂಪಾಯಿ ನೀಡೋದಾಗಿ ಘೋಷಣೆ ಮಾಡಿದೆ. ಆದರೆ ಮೃತರ ಸಂಖ್ಯೆಯನ್ನೂ ಇನ್ನೂ ದೃಢಪಡಿಸಿಲ್ಲ. ಸಾವು ನೋವು ಸಂಭವಿಸಿದೆ ಎಂದು ಹೇಳಲಾಗಿದೆ.