ಉತ್ತರಪ್ರದೇಶದ 2.3 ಅಡಿ ಎತ್ತರದ ವ್ಯಕ್ತಿಯ ಮದುವೆಗೆ ಮೋದಿ, ಸಿಎಂ ಯೋಗಿಗೆ ಆಹ್ವಾನ
ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಉತ್ತರಪ್ರದೇಶದ 2.3 ಅಡಿ ಕುಬ್ಜ ವ್ಯಕ್ತಿಯೊಬ್ಬರು ತಮ್ಮ ವಿವಾಹಕ್ಕೆ ಆಹ್ವಾನಿಸಿದ್ದಾರೆ.
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ನಿವಾಸಿ 2.3 ಅಡಿ ಎತ್ತರದ ವ್ಯಕ್ತಿ ಅಜೀಂ ಮನ್ಸೂರಿ ಅವರೇ ಪ್ರಧಾನಿ ಮತ್ತು ಮುಖ್ಯಮಂತ್ರಿಯವರನ್ನು ಮದುವೆಗೆ ಆಹ್ವಾನಿಸಿದ್ದು, ನವೆಂಬರ್ 7ರಂದು ಅಜೀಂ ವಿವಾಹ ನಡೆಯಲಿದೆ.

ಇನ್ನು ಹಲವು ವರ್ಷಗಳಿಂದ ತನಗೆ ಸೂಕ್ತವಾದ ವಧುವಿಗಾಗಿ ಹುಡುಕಾಡಿದ್ದೇನೆ. ಆದರೆ ಅವರ ಎತ್ತರಕ್ಕೆ ಸಮನಾದ ವಧು ಸಿಕ್ಕಿರಲಿಲ್ಲ. ಮದುವೆಯಾಗಲು ವಧು ಹುಡುಕಿಕೊಡುವಂತೆ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳನ್ನೂ ಭೇಟಿಯಾಗಿದ್ದು, ಇದೀಗ ಹಲವು ಪ್ರಯತ್ನಗಳ ನಂತರ ಹಾಪುರದಲ್ಲಿ ಬುಷಾರಾ ಎಂಬ ಯುವತಿಯನ್ನು ನೋಡಿದ್ದು, ಇಬ್ಬರಿಗೂ ಒಪ್ಪಿಗೆಯಾಗಿ ಮದುವೆ ನಡೆಯಲಿದೆ.





