March 22, 2026

ಬಸ್ ನ ಚಕ್ರಕ್ಕೆ ಸಿಲುಕಿ ಬಾಲಕ ಸಾವು

0
image_editor_output_image-1560447130-1667023903641.jpg

ನಂಜನಗೂಡು: ಬಸ್ ನ ಚಕ್ರಕ್ಕೆ ಸಿಲುಕಿ ಬಾಲಕನೋರ್ವ ಸಾವನಪ್ಪಿದ ಘಟನೆ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಪ್ರಜ್ವಲ್ (14) ಮೃತ ಬಾಲಕ.

14 ವರ್ಷದ ಪ್ರಜ್ವಲ್ ಮೃತ ಬಾಲಕ

ನಂಜೀಪುರ ಗ್ರಾಮದ ಪ್ರಕಾಶ್ ಮತ್ತು ಪುತ್ರ ಪ್ರಜ್ವಲ್ ಇಬ್ಬರೂ ತಮ್ಮೂರಿಗೆ ತೆರಳುವಾಗ ದುರ್ಘಟನೆ ನಡೆದಿದೆ.

ನಂಜನಗೂಡು-ಹುಲ್ಲಹಳ್ಳಿ-ಹಂಪಾಪುರಕ್ಕೆ ಸಂಚರಿಸುವ ಸಾರಿಗೆ ಬಸ್ ಸಂಚರಿಸುವ ಸಮಯದಲ್ಲಿ ಮುಂದಿನ ಬಾಗಿಲಿನಿಂದ ಇಳಿಯುತ್ತಿದ್ದಾಗ ಪ್ರಜ್ವಲ್ ಕೆಳಗೆ ಬಿದ್ದಿದ್ದಾನೆ. ಹಿಂಬದಿಯ ಚಕ್ರ ಆತನ ಹೊಟ್ಟೆಯ ಮೇಲೆ ಹರಿದಿದೆ. ಪರಿಣಾಮ, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನೆ ವೇಳೆ ತಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿತ್ತು. ಆದರೆ, ಆಂಬ್ಯುಲೆನ್ಸ್‌ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬರಲೇ ಇಲ್ಲ. ಈ ಸಂದರ್ಭದಲ್ಲಿ ಮೃತ ಬಾಲಕನ ತಂದೆಯ ಆಕ್ರಂದನ ಮುಗಿಲು ಮುಟ್ಟಿ ಕರುಳು ಹಿಂಡುವಂತಿತ್ತು. .

Leave a Reply

Your email address will not be published. Required fields are marked *

error: Content is protected !!