February 4, 2026

ವಿಟ್ಲ: ಮಹಿಳೆಯ ಮೊಬೈಲ್ ಗೆ ಸಂದೇಶ ಕಳುಹಿಸಿದ ವಿಚಾರ: ಯುವಕರ ನಡುವೆ ಘರ್ಷಣೆ

0
Assault-1547839892.jpg

ಮಾಣಿ: ಮಹಿಳೆಯೋರ್ವರ ಮೊಬೈಲ್ ಗೆ ಸಂದೇಶ (ಮೆಸೇಜ್) ಕಳುಹಿಸಿದ ವಿಚಾರವಾಗಿ ಯುವಕರ ನಡುವೆ ಹೊಡೆದಾಟ ನಡೆದ ಘಟನೆ ಅ.22 ರಂದು ಮಾಣಿಯಲ್ಲಿ ನಡೆದಿದೆ.

ಮಹಿಳೆಯೋರ್ವರಿಗೆ ಯುವಕನೋರ್ವ ಸಂದೇಶ ಕಳುಹಿಸಿದ್ದು, ಈ ಹಿನ್ನೆಲೆ ಮಹಿಳೆಯ ಪತಿ ಯುವಕನನ್ನು ವಿಚಾರಿಸಿದ್ದು, ಈ ವೇಳೆ ಹೊಡೆದಾಟ ನಡೆದಿದೆ ಎನ್ನಲಾಗಿದೆ.

ಮಹಿಳೆಯ ಪತಿ ಮತ್ತು ಇತರರು ವಿಚಾರಣೆಗಾಗಿ ಯುವಕನನ್ನು ಮಾಣಿ ಸಮೀಪ ಕರೆದಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಮಾಣಿಯ ರಸ್ತೆಯ ಬದಿ ಹೊಡೆದಾಟ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Leave a Reply

Your email address will not be published. Required fields are marked *

error: Content is protected !!