August 13, 2026

ಮಂಗಳೂರು: ಪ್ರತಿಭಾ ಕುಳಾಯಿಯ ಅಶ್ಲೀಲ ನಿಂದನೆ – ಶ್ಯಾಮ ಸುದರ್ಶನ್‌ ಭಟ್‌ ವಿರುದ್ಧ ದೂರು ದಾಖಲು

0
IMG-20221022-WA0041.jpg

ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಹೇಳಿಕೆ ನೀಡಿದ್ದ ಕಹಳೆ ನ್ಯೂಸ್ ನ ಶ್ಯಾಮ ಸುದರ್ಶನ್‌ ಭಟ್‌ ಹೊಸಮೂಲೆ ವಿರುದ್ಧ ಶನಿವಾರ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರತ್ಕಲ್‌‌‌ ಟೋಲ್‌ಗೇಟ್ ವಿರೋಧಿ ಹೋರಾಟದಲ್ಲಿ ಪ್ರತಿಭಾ ಕುಳಾಯಿ ಅವರನ್ನು ಪೊಲೀಸರು ಬಂಧಿಸುವಾಗ ಪ್ರತಿಭಾ ಕುಳಾಯಿ ಪ್ರತಿಭಟಿಸಿದ್ದು, ಇದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಇನ್ನು ಪ್ರತಿಭಾ ಕುಳಾಯಿ ಅವರಿಗೆ ಮಲಗಿ ಮಾಡಿ ಒಳ್ಳೆ ಅಭ್ಯಾಸ ಉಂಟು ಮಾರೆ ಎಂದು ಶ್ಯಾಮ ಸುದರ್ಶನ್‌ ಭಟ್‌ ಹೊಸಮೂಲೆ ನಿಂದಿಸಿದ್ದು, ಇದಕ್ಕೆ ಹಲವು ಮಂದಿ ಬೆಂಬಲವಾಗಿ ಹಲವು ರೀತಿಯ ನಿಂದನೆಗಳನ್ನು ಕಾಮೆಂಟ್‌ ಮಾಡಿದ್ದು, ಅವರ ವಿರುದ್ದ ಪ್ರತಿಭಾ ಕುಳಾಯಿ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!