August 13, 2026

ಕಾಸರಗೋಡು: ಸೀಮೆಎಣ್ಣೆ ಗೋದಾಮಿನಲ್ಲಿ ಬೆಂಕಿ ಅವಘಡ: ಅಪಾರ ನಾಶ ನಷ್ಟ

0
Screenshot_20221022-213034_Chrome.jpg

ಕಾಸರಗೋಡು: ಸೀಮೆಎಣ್ಣೆ ಗೋದಾಮಿನಲ್ಲಿ ಭಾರೀ ಬೆಂಕಿ ಅನಾಹುತ ಉಂಟಾಗಿ ಅಪಾರ ನಾಶ ನಷ್ಟ ಸಂಭವಿಸಿರುವ ಘಟನೆ ವಿದ್ಯಾನಗರದಲ್ಲಿ ಶನಿವಾರ ಸಂಜೆ ನಡೆದಿದೆ.

ದುರಂತ ನಡೆದ ಸಂದರ್ಭದಲ್ಲಿ ಗೋದಾಮಿನಲ್ಲಿ ಕಾರ್ಮಿಕರು ಇಲ್ಲದಿದ್ದುದರಿಂದ ಅಪಾಯ ತಪ್ಪಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ. ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಮುನೀರ್ ಎಂಬವರ ಮಾಲಕತ್ವದ ಎರಡಂತಸ್ತಿನ ಕಟ್ಟಡದಲ್ಲಿ ಈ ಘಟನೆ ನಡೆದಿದ್ದು, ಅಗ್ನಿ ಶಾಮಕ ದಳ ಹಾಗೂ ಪರಿಸರ ವಾಸಿಗಳ ಸಕಾಲಿಕ ಕಾರ್ಯಾಚರಣೆಯಿಂದ ಭಾರೀ ಅನಾಹುತ ತಪ್ಪಿದೆ ಎನ್ನಲಾಗಿದೆ.

ಬೆಂಕಿ ಅನಾಹುತ ಸಂಭವಿಸಿದ ಕೂಡಲೇ ಈ ಕಟ್ಟಡದಲ್ಲಿದ್ದವರನ್ನು ತೆರವುಗೊಳಿಸಲಾಗಿದ್ದು, ಕಾಸರಗೋಡಿ ನಿಂದ ಆಗಮಿಸಿದ ಮೂರು ಅಗ್ನಿ ಶಾಮಕ ಘಟಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!