March 23, 2026

ಕಳ್ಳತನಕ್ಕೆಂದು ಬಂದ ವ್ಯಕ್ತಿ ಮನೆಯಲ್ಲೇ ಆತ್ಮಹತ್ಯೆ

0
Screenshot_2022-10-22-10-42-43-72_680d03679600f7af0b4c700c6b270fe7.jpg

ಬೆಂಗಳೂರು: ಇಲ್ಲೊಬ್ಬ ಕಳ್ಳ ಕಳ್ಳತನಕ್ಕೆಂದು ಬಂದ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ.

ದಿಲೀಪ್ ಬಹದ್ದೂರ್ ಮೃತ ವ್ಯಕ್ತಿ. ಈತ ಟೆಕ್ಕಿ ಫ್ಯಾಮಿಲಿಯೊಂದು ಯೂರೋಪ್ ಪ್ರವಾಸ ಹೋಗಿದ್ದಾಗ ಅವರ ಮನೆಗೆ ಹೋಗಿದ್ದ. ಅಲ್ಲೇ ಮುಂಜಾನೆಯಿಂದ ಸಂಜೆವರೆಗೂ ವಾಸ್ತವ್ಯ ಹೂಡಿದ್ದ. ಅಷ್ಟೇ ಅಲ್ಲದೇ ಬಾತ್ ರೂಮ್‍ನಲ್ಲಿ ಸ್ನಾನ ಮಾಡಿ ಇಡೀ ಮನೆಯನ್ನು ಸರ್ಚ್‌ ಮಾಡಿದ್ದಾನೆ. ಆದರೆ ಸಂಜೆ ಆಗುತ್ತಿದ್ದಂತೆ ಯುರೋಪ್ ಟ್ರಿಪ್ ಮುಗಿಸಿ ಟೆಕ್ಕಿ ಫ್ಯಾಮಿಲಿ ಮನೆಗೆ ಮರಳಿದ್ದಾರೆ.

ಮನೆಯವರು ಮನೆಗೆ ಎಂಟ್ರಿ ಆಗುತ್ತಿದ್ದಂತೆ ದೇವರ ಕೋಣೆ ಮುಂದೆ ಸೀಲಿಂಗ್ ಫ್ಯಾನ್‍ಗೆ ನೇಣು ಹಾಕಿಕೊಂಡು ದಿಲೀಪ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ದಿಲೀಪ್ ಬಹದ್ದೂರ್ 2006ರಲ್ಲಿ ಜೀವನ್ ಭೀಮಾನಗರದಲ್ಲಿ ಕಳ್ಳತನ ಕೃತ್ಯದಲ್ಲಿ ಬಂಧಿಯಾಗಿದ್ದ. ಸದ್ಯ ಘಟನೆ ಕುರಿತು ಇಂದಿರಾನಗರ ಠಾಣೆಯಲ್ಲಿ ಅನುಮಾನಸ್ಪದ ಸಾವು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!