‘ಭಾರತ್ ಜೋಡೋ ಪಾಕ್ ಆಕ್ರಮಿತ ಕಾಶ್ಮೀರದಲ್ಲೇ ಆಗಬೇಕು ಹೊರತು ಭಾರತದ ಒಳಗಲ್ಲ’ – ಶೋಭಾ
ಭಾರತ್ ಜೋಡೋ ಆಗಬೇಕಿರುವುದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿಯೇ ಹೊರತಾಗಿ ಭಾರತದ ಒಳಗಲ್ಲ ಎಂದು ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ದೈಹಿಕ ಆರೋಗ್ಯಕ್ಕಾಗಿ ಪ್ರದರ್ಶನ ಮಾಡುತ್ತಿದ್ದು, ಈ ಯಾತ್ರೆಯಿಂದ ಯಾವುದೇ ಲಾಭವಿಲ್ಲ ಎಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದ ವೇಳೆ ಭಾರತದ ಒಂದು ಭಾಗವನ್ನು ಪಾಕ್‌ಗೆ ಬಿಟ್ಟುಕೊಟ್ಟು, ಅದೀಗ ಪಾಕ್ ಆಕ್ರಮಿತ ಕಾಶ್ಮೀರ ಆಗಿದೆ. ದೇಶದ ಬಹುಭಾಗ ಚೀನಾಕ್ಕೆ ಹೋಗಿದೆ. ಧೀಮ್‌ಥಾನವನ್ನು 1992ರಲ್ಲಿ ಬಾಂಗ್ಲಾದೇಶಕ್ಕೆ ನೀಡಿದರು. ಇಂತಹ ಜಾಗಗಳಲ್ಲೆಲ್ಲ ಭಾರತ್ ಜೋಡೋ ಆಗಬೇಕಿದೆಯೇ ಹೊರತು ಭಾರತದ ಒಳಗಲ್ಲ ಎಂದು ಹೇಳಿದ್ದಾರೆ.





