February 2, 2026

ಕೆಮ್ಮಿನ ಸಿರಪ್ ಸೇವಿಸಿ 99 ಮಕ್ಕಳು ಸಾವು: ಕೆಮ್ಮಿನ ಸಿರಪ್ ಮೇಲೆ ನಿಷೇಧ ಹೇರಿದ ಇಂಡೊನೇಷ್ಯಾ

0
syrup-1.jpg

ಜಕಾರ್ತ: ಆಫ್ರಿಕಾದ ಗ್ಯಾಂಬಿಯಾ ಬಳಿಕ ಇದೀಗ ಇಂಡೋನೇಷ್ಯಾದಲ್ಲಿ ಕೂಡ ಕೆಮ್ಮಿನ ಸಿರಪ್ ಸೇವಿಸಿದ ಮಕ್ಕಳು ಮೃತಪಟ್ಟಿದ್ದಾರೆ. ಇಂಡೋನೇಷ್ಯಾದಲ್ಲಿ ಇದುವರೆಗೆ 99 ಮಕ್ಕಳು ಸಿರಪ್ ಸೇವನೆ ಬಳಿಕ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.

ಸಿರಪ್ ಸೇವಿಸಿದ ಬಳಿಕ ಮಕ್ಕಳ ಮೂತ್ರ ಪಿಂಡಕ್ಕೆ ಹಾನಿಯಾಗಿತ್ತು. ಇದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಸಿರಪ್ ಗಳ ಮೇಲೆ ಇಂಡೋನೇಷ್ಯಾ ನಿಷೇಧ ಹೇರಿದೆ. ಈ ತಿಂಗಳ ಆರಂಭದಲ್ಲಿ ಆಫ್ರಿಕಾದ ಗ್ಯಾಂಬಿಯಾ ದೇಶದಲ್ಲಿ ಕೂಡ ಇದೇ ರೀತಿಯ ಪ್ರಕರಣ ವರದಿಯಾಗಿತ್ತು. ಭಾರತ ಮೂಲದ ಔಷಧಿ ಸಂಸ್ಥೆಯ ಸಿರಪ್ ಸೇವಿಸಿದ ಮಕ್ಕಳು ಮೃತಪಟ್ಟಿದ್ದಾರೆ ಎಂದು ಗ್ಯಾಂಬಿಯಾ ಆರೋಪಿಸಿತ್ತು

Leave a Reply

Your email address will not be published. Required fields are marked *

error: Content is protected !!