February 2, 2026

ಸುರತ್ಕಲ್ ಟೋಲ್‍ಗೇಟ್ ಕಿತ್ತೆಸೆಯಲು ಯತ್ನಿಸಿದ ಹೋರಾಟಗಾರರ ಮೇಲೆ ಎಫ್‍ಐಆರ್ ದಾಖಲು

0
image_editor_output_image1114629118-1666330210006.jpg

ಮಂಗಳೂರು: ಇಲ್ಲಿನ ಸುರತ್ಕಲ್ ಟೋಲ್‍ಗೇಟ್ ವಿವಾದ ಸದ್ಯದ ಮಟ್ಟಿಗೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಟೋಲ್‍ಗೇಟ್ ಕಿತ್ತೆಸೆಯಲು ಯತ್ನಿಸಿದ ಹಿನ್ನೆಲೆಯಲ್ಲಿ ಹೋರಾಟಗಾರರ ಮೇಲೆ ಎಫ್‍ಐಆರ್ ದಾಖಲಾಗಿದೆ. ಹೀಗಾಗಿ ಟೋಲ್ ಸಂಗ್ರಹ ನಿಲ್ಲುವವರೆಗೂ ರಾತ್ರಿ- ಹಗಲು ಅನಿರ್ದಿಷ್ಟ ಧರಣಿಗೆ ನಿರ್ಧರಿಸಿದ್ದಾರೆ.

ಅ.18 ರಂದು ಮಂಗಳೂರಿನ ಸುರತ್ಕಲ್ ಟೋಲ್‍ಗೇಟ್ ಬಳಿ ಭಾರೀ ಹೈಡ್ರಾಮಾವೇ ನಡೆದಿತ್ತು. ಸುರತ್ಕಲ್ ಟೋಲ್‍ಗೇಟ್ ಅಕ್ರಮ ಎಂದು ಟೋಲ್‍ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಹೋರಾಟ ಉಗ್ರ ಸ್ವರೂಪ ಪಡೆದಿತ್ತು.

ಪೊಲೀಸರು ಹಾಕಿದ್ದ ತಡೆಬೇಲಿ ಮುರಿದು ಟೋಲ್‍ಗೇಟ್‍ನತ್ತ ನುಗ್ಗಿದ್ದ ಹೋರಾಟಗಾರರು, ಹೈಡ್ರಾಮಾ ನಡೆಸಿದ್ದು ಬಳಿಕ ಪೊಲೀಸರು ನೂರಾರು ಹೋರಾಟಗಾರರನ್ನು ಬಂಧಿಸಿ, ಬಿಡುಗಡೆಗೊಳಿಸಿದ್ದರು.

ಆದರೆ ಇದೀಗ ಟೋಲ್‍ಗೇಟ್‍ನ ಗುತ್ತಿಗೆದಾರ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ನೀಡಿದ ದೂರಿನಂತೆ ಹೋರಾಟಗಾರರ ಮೇಲೆ ಎರಡು ಎಫ್‍ಐಆರ್ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!