February 3, 2026

ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ ಬಾಲಕಿ ನಾಪತ್ತೆ

0
allwyn_191022_msng1.jpg

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಮನೆಯಿಂದ ನಾಪತ್ತೆಯಾದ ಬಾಲಕಿಯೊಬ್ಬಳು ಮಂಗಳೂರಿಗೆ ಆಗಮಿಸಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಸೋಮವಾರ ಮಂಗಳೂರಿಗೆ ಬಂದಿಳಿದ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಬಾಲಕಿ ಭಾರ್ಗವಿ (14) ನಾಪತ್ತೆಯಾದ ಬಾಲಕಿ.

ಭಾರ್ಗವಿ ಅವರು ಸೋಮವಾರ ಮುಂಜಾನೆ 3 ಗಂಟೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದ ನಂತರ ನಾಪತ್ತೆಯಾಗಿದ್ದಾರೆ.

ಇನ್ನು ಆಟೋ ಬಾಡಿಗೆಗೆ ಪಡೆದು ಮುಕ್ಕಾ ಬೀಚ್, ಕದ್ರಿ ಪಾರ್ಕ್ ಪ್ರವಾಸ ಮಾಡಿದ್ದಳು ಎನ್ನಲಾಗಿದ್ದು, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ತಲುಪಿದ ಬಳಿಕ ಆಟೋ ಚಾಲಕನೊಬ್ಬನಿಗೆ ತನ್ನ ಚಿಕ್ಕಮ್ಮನ ಮನೆಗೆ ಹೋಗುವುದಾಗಿ ಹೇಳಿದ್ದಾಳೆ ಎಂದು ತಿಳಿದುಬಂದಿದೆ. ಆದರೆ ಆಕೆ ಎಲ್ಲಿದ್ದಾಳೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!